ಭಾರತದಲ್ಲಿ ಚಂದ್ರ ಗ್ರಹಣ ಎಂದು ಕರೆಯಲ್ಪಡುವ ಗ್ರಹಣವು ಯಾವಾಗಲೂ ಗಮನಾರ್ಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಘಟನೆಯಾಗಿದೆ. ಇದು ಆಕಾಶದಲ್ಲಿ ಸಂಭವಿಸುವ ಘಟನೆಯಾದರೂ ಇಂದಿಗೂ ಜನರು ಇದನ್ನು ಗೌರವಿಸುತ್ತಾರೆ ಮತ್ತು ಇದರ ನಿಯಮಗಳನ್ನು ಅನುಸರಿಸುತ್ತಾರೆ. 2024 ರ ಮೊದಲ ಚಂದ್ರಗ್ರಹಣವು ಫಾಲ್ಗುಣ ಮಾಸದ ಪೂರ್ಣಿಮಾ ತಿಥಿಯಂದು ಅಂದರೆ ಮಾರ್ಚ್ 25 ರಂದು ಸಂಭವಿಸುತ್ತದೆ. ಇದು ಬಣ್ಣಗಳ ಹಬ್ಬವಾದ ಹೋಳಿಯೊಂದಿಗೆ ಸಂಭವಿಸುತ್ತದೆ. ಹೋಳಿ ಹಬ್ಬದ ದಿನದಂದು ನಡೆಯುವ ಈ ಅಪರೂಪದ ಗ್ರಹಣವನ್ನು ಪೆನುಂಬ್ರಲ್ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. ಈ ಚಂದ್ರಗ್ರಹಣದ ಸಮಯ ಮತ್ತು ದಿನಾಂಕ, ಇದು ಭಾರತದಲ್ಲಿ ಗೋಚರಿಸಲಿದೆಯೇ ಎಂಬುದನ್ನು ತಿಳಿಯೋಣ..
– ಪೂರ್ಣಿಮಾ ತಿಥಿ ಆರಂಭ: 2024 ರ ಮಾರ್ಚ್ 24 ರಂದು ಬೆಳಗ್ಗೆ 9:54 ರಿಂದ
– ಪೂರ್ಣಿಮಾ ತಿಥಿ ಮುಕ್ತಾಯ: 2024 ರ ಮಾರ್ಚ್ 25 ರಂದು ಮಧ್ಯಾಹ್ನ 12:29
– ಚಂದ್ರಗ್ರಹಣದ ಮೊದಲ ಹಂತ ಆರಂಭ: 2024 ರ ಮಾರ್ಚ್ 25 ರಂದು ಬೆಳಗ್ಗೆ 10:24 ರಿಂದ
– ಚಂದ್ರಗ್ರಹಣದ ಗರಿಷ್ಠ ಹಂತ್ರ: 2024 ರ ಮಾರ್ಚ್ 25 ರಂದು ಮಧ್ಯಾಹ್ನ 12:43
– ಚಂದ್ರಗ್ರಹಣದ ಅಂತಿಮ ಹಂತ್ರ: 2024 ರ ಮಾರ್ಚ್ 25 ರಂದು ಮಧ್ಯಾಹ್ನ 3:01