ನಮ್ಮ ಬಗ್ಗೆ

ಸ್ಪೂರ್ತಿಯ ಬಗ್ಗೆ ಒಂದು ನೋಟ ಹಾಯಿಸೋಣ…

ಸ್ಪೂರ್ತಿಯು ಶಕ್ತಿಯುತವಾದ ಭಾವನೆಯಾಗಿದ್ದು ಅದು ಕ್ರಮ ತೆಗೆದುಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತದೆ. ಇದು ಜನರು, ಪ್ರಕೃತಿ, ಪುಸ್ತಕಗಳು ಅಥವಾ ಸರಳ ಚಿಂತನೆಯಂತಹ ವಿವಿಧ ಮೂಲಗಳಿಂದ ಬರಬಹುದು.

ನಮ್ಮ ಗುರಿಗಳನ್ನು ಸಾಧಿಸಲು ಪ್ರೇರೇಪಣೆ ಮುಖ್ಯವಾಗಿದೆ. ಇದು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ

ಸ್ಫೂರ್ತಿಯನ್ನು ಎಲ್ಲೆಡೆ ಕಾಣಬಹುದು. ಅದು ಯಶಸ್ವಿ ವ್ಯಕ್ತಿಯಾಗಿರಬಹುದು, ಸುಂದರವಾದ ಸೂರ್ಯಾಸ್ತವಾಗಿರಬಹುದು, ಆಸಕ್ತಿದಾಯಕ ಪುಸ್ತಕವಾಗಿರಬಹುದು ಅಥವಾ ದಯೆಯ ಒಂದು ಸಣ್ಣ ಕಾರ್ಯವೂ ಆಗಿರಬಹುದು,ಸಾಮಾಜಿಕ ಕಳಕಳಿಯ ವಿಚಾರ ಆಗಿರಬಹುದು ,ರಾಜಕೀಯ ,ಔದ್ಯಮಿಕ,ಆಹಾರ,ವಿಹಾರ,ಉಡುಗೆ-ತೊಡುಗೆ,ನಮ್ಮ ಸಂಸ್ಕೃತಿ-ನಮ್ಮ ಪರಂಪರೆ,ನಮ್ಮ ಧಾರ್ಮಿಕ ವಿಚಾರ,ಕ್ರೀಡೆ,ಹಿರಿಯರ ಅನುಭವದ ಮಾತುಗಳು,ಮಕ್ಕಳ ಲೋಕ,ಸಾಧಕರ ಜೊತೆ ಮಾತುಕತೆ ,ಚಿತ್ರ ಜಗತ್ತಿನ ಬಗ್ಗೆ ಇಣುಕು ನೋಟ, ನಿತ್ಯ ಪಂಚಾಂಗ ,ದಿನನಿತ್ಯದ ರಾಶಿ ಭವಿಷ್ಯ,ಹವಾಮಾನ ವರದಿ,ಚಿನ್ನದ ಬೆಲೆ ಹೀಗೆ ಹತ್ತಾರು ವಿಷಯಗಳನ್ನು ನಿಮ್ಮ ಮುಂದೆ ಸಾದರ ಪಡಿಸಲು ಸ್ಪೂರ್ತಿ ವೆಬ್ ಚಾನೆಲ್ ಮೂಲಕ ನಿಮ್ಮ ಬಳಿ
ಬನ್ನಿ ಬಂದಿದ್ದೇವೆ.
ಜೊತೆಗೂಡಿ ನಡೆಯೋಣ ಸಾಮಾಜಿಕ ಜಾಗ್ರತಿ ಮೂಡಿಸೋಣ.