ಹಿಂದೂಗಳ ಹೊಸ ವರ್ಷ ಯುಗಾದಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ಯುಗಾದಿಯು ಮೂರು ರಾಜಯೋಗಗಳನ್ನು ತರಲಿದೆ. ಇದರಿಂದ ಕೆಲವು ರಾಶಿಯವರು ಭಾರಿ ಅನುಕೂಲ ಪಡೆಯಲಿದ್ದಾರೆ.
ಯುಗಾದಿ ಹಬ್ಬ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಹಬ್ಬದಿಂದ ಹಿಂದೂಗಳಿಗೆ ಹೊಸ ವರ್ಷ ಆರಂಭವಾಗುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜನವರಿ 1 ಹೊಸ ವರ್ಷವಾದ್ರೂ ಕೂಡ ಹಿಂದೂಗಳಿಗೆ ಯುಗಾದಿಯಿಂದ ಹೊಸ ವರ್ಷ ಆರಂಭವಾಗುತ್ತದೆ. ಈ ವರ್ಷ ಏಪ್ರಿಲ್ 9 ರಂದು ಯುಗಾದಿ ಹಬ್ಬವಿದೆ.
ಹಿಂದೂಗಳ ಪ್ರಮುಖ ಹಬ್ಬ ಯುಗಾದಿಯೊಂದಿಗೆ ಕ್ರೋಧಿ ನಾಮ ಸಂವತ್ಸರ ಆರಂಭವಾಗಲಿದೆ. ಈ ವರ್ಷ, ಹಬ್ಬದೊಂದಿಗೆ 3 ಮಂಗಳಕರ ಯೋಗಗಳು ಜೊತೆಯಾಗಲಿವೆ. ಸುಮಾರು 30 ವರ್ಷಗಳ ನಂತರ ಈ ಮೂರು ಯೋಗಗಳು ಒಂದಾಗುತ್ತಿವೆ. ಅಂದು ಅಮೃತಯೋಗ, ಸರ್ವಾರ್ಧ ಸಿದ್ಧಿ ಯೋಗ ಮತ್ತು ಶಾಸರಾಜಯೋಗಗಳು ರೂಪುಗೊಳ್ಳುತ್ತವೆ.
ಹೊಸ ವರ್ಷದ ನಂತರ ಮಂಗಳ ಮತ್ತು ಶನಿ ಗ್ರಹಗಳ ಪ್ರಭಾವವು ವರ್ಷವಿಡೀ ಗೋಚರಿಸುತ್ತದೆ. ಪರಿಣಾಮವಾಗಿ, ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಅಪಾರ ಯಶಸ್ಸನ್ನು ಹೊಂದುತ್ತಾರೆ. ಈ ರಾಜಯೋಗವು ಹನ್ನೆರಡು ರಾಶಿಗಳ ಮೇಲೆ ಪ್ರಭಾವ ಬೀರಿದರೂ, ಮೂರು ರಾಶಿಗಳಿಗೆ ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಏಪ್ರಿಲ್ 9 ರಂದು ರೇವತಿ ಮತ್ತು ಅಶ್ವಿನಿ ನಕ್ಷತ್ರಗಳ ಸಮೇತ ಸರ್ವಾರ್ಥ ಸಿದ್ಧಿ ಯೋಗ ಮತ್ತು ಅಮೃತ ಯೋಗ ಕೂಡಿ ಬರುತ್ತಿದೆ. ಈ ಎರಡೂ ಯೋಗಗಳು ಏಪ್ರಿಲ್ 10 ರವರೆಗೆ ಇರುತ್ತದೆ. ಅಂದು ಬೆಳಿಗ್ಗೆ ಚಂದ್ರನು ಮೀನ ರಾಶಿಯಲ್ಲಿ ಇರುತ್ತಾನೆ. ನಂತರ ಮೇಷ ರಾಶಿ ಪ್ರವೇಶಿಸುತ್ತಾನೆ. ಅಲ್ಲದೆ ಕುಂಭ ರಾಶಿಯಲ್ಲಿ ಶನಿ ಮತ್ತು ಮಂಗಳ ಕೂಡಿದ್ದು ಶಸ ಮಹಾಪುರುಷ ರಾಜಯೋಗ ಉಂಟಾಗುತ್ತದೆ. ಇಂತಹ ಅದ್ಭುತ ಯೋಗಗಳ ಪ್ರಭಾವದಿಂದ ಅದೃಷ್ಟವನ್ನು ಪಡೆಯುವ ಮೂರು ರಾಶಿಚಕ್ರ ಚಿಹ್ನೆಗಳು ಯಾವುವು ನೋಡಿ.
ವೃಷಭ ರಾಶಿ
ಕ್ರೋಧಿ ಹೆಸರಿನ ವರ್ಷವು ವೃಷಭ ರಾಶಿಯವರಿಗೆ ಅದೃಷ್ಟವನ್ನು ತರುವಂತಹ ಮೂರು ಮಂಗಳಕರ ಯೋಗಗಳಿಂದ ರೂಪುಗೊಂಡಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯುತ್ತದೆ. ನಿಮ್ಮ ಕೆಲಸವನ್ನು ಕಚೇರಿಯಲ್ಲಿ ಪ್ರಶಂಸಿಸಲಾಗುತ್ತದೆ. ಬಡ್ತಿ ಅಥವಾ ಇನ್ಕ್ರಿಮೆಂಟ್ ಪಡೆಯಲಿದ್ದೀರಿ. ಸಮಾಜದಲ್ಲಿ ನಿಮ್ಮ ಮೇಲಿನ ಗೌರವ ದುಪ್ಪಾಟ್ಟಾಗುತ್ತದೆ. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಹೂಡಿಕೆಗಳು ಲಾಭವನ್ನು ನೀಡುತ್ತವೆ. ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯ ನಿಮಗೆ ಬರುತ್ತದೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಹೊಸ ವರ್ಷವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅನೇಕ ಹೊಸ ವೃತ್ತಿ ಅವಕಾಶಗಳು ನಿಮಗಾಗಿ ಕಾಯುತ್ತಿವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವರು. ಭೂಮಿ ಮತ್ತು ವಾಹನ ಖರೀದಿಗೆ ಅವಕಾಶ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ವ್ಯಾಪಾರದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಪ್ರೀತಿಯ ಜೀವನ ಅದ್ಭುತವಾಗಿದೆ. ಅವರು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ. ನೀವು ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಸಂಗಾತಿಯು ಸಂತೋಷವಾಗಿರುತ್ತಾರೆ.