spot_img

ಅಮೆರಿಕಾದ ಪುತ್ತಿಗೆ ಮಠದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ಸಂಪನ್ನ :

ಪುತ್ತಿಗೆ ಶ್ರೀಗಳ ಮಾರ್ಗದರ್ಶನ

ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಅಮೆರಿಕಾದ ಅಟ್ಲಾಂಟಾ ಮಹಾನಗರದಲ್ಲಿರುವ ಪುತ್ತಿಗೆ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಅತ್ಯಂತ ವೈಭವದಿಂದ ಇಂದು ಸಂಪನ್ನಗೊಂಡಿತು.

ಪುತ್ತಿಗೆಮಠದ ಅನಿವಾಸಿ ಶಾಖೆಗಳ ಮುಖ್ಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀನಿವಾಸ ಕಲ್ಯಾಣ ಮಹೋತ್ಸವವು ನೃತ್ಯ ಗೀತ ವಾದ್ಯಗಳೊಂದಿಗೆ ನೂರಾರು ಭಕ್ತಜನರ ಸಂಭ್ರಮದ ಪಾಲ್ಗೊಳ್ಳುವಿಕೆಯೊಂದಿಗೆ ಅತ್ಯಂತ ವೈಭವದೊಂದೊಂದಿಗೆ ಜರಗಿತು.
ಪುತ್ತಿಗೆ ಶ್ರೀಪಾದರು ವೀಡಿಯೋ ಸಂದೇಶದ ಮೂಲಕ ಭಕ್ತಜನರನ್ನು ಹರಸಿದರು.

ಶ್ರೀನಿವಾಸ ಕಲ್ಯಾಣಮಹೋತ್ಸವಕ್ಕೆಂದೇ ಶ್ರೀ ಹರೀಶ ಭಟ್ ತಂಡದವರು ಸಿದ್ದಪಡಿಸಿದ್ದ , ಭಗವದರ್ಪಿತವಾದ ವಿವಿಧ ಭಕ್ಷ್ಯ ಭೋಜ್ಯ್ಯಗಳೊಂದಿಗೆ ಸಂಯೋಜಿತವಾದ ಉಡುಪಿ ಊಟವನ್ನು ಸಾವಿರಾರು ಮಂದಿ ಭಕ್ತಿಯಿಂದ ಸವಿದರು.ಪುತ್ತಿಗೆ ಶ್ರೀಪಾದರು ಸ್ಥಾಪಿಸಿರುವ ಶ್ರೀಕೃಷ್ಣ ಮಂದಿರಗಳಲ್ಲಿ ಇದು ಆರನೇ ಮಂದಿರವಾಗಿದೆ.

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು