ಮಂಗಳೂರು :ದಿನಾಂಕ 01-04-24 ರಂದು ಮಂಗಳೂರಿನ BGS ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಪ್ರಾರಂಭವಾಯಿತು.
2ನೆಯ ದಿನದ ಶಿಬಿರದಲ್ಲಿ ಪ್ರಾಂತ ಬಾಲಗೋಕುಲ ಪ್ರಮುಖರಾದ ಶ್ರೀ ಉಮೇಶಜೀ ಹಾಗೂ ಮಂಗಳೂರು ಮಹಾನಗರದ ಬಾಲಗೋಕುಲ ಸಂಯೋಜಕರಾದ ಶ್ರೀ ನರಸಿಂಹ ಕುಲಕರ್ಣಿ ಇವರು ಮಕ್ಕಳಿಗೆ ಯೋಗ, ಭಜನೆ ಮತ್ತು ಆಟಗಳ ಕುರಿತು ಮಾಹಿತಿ ಜೊತೆಗೆ ಪ್ರಾತ್ಯಕ್ಷಿಕೆ ಮಾಡಿಸಿದರು.
50 ಕ್ಕೂ ಹೆಚ್ಚು ಮಕ್ಕಳು ಮತ್ತು ವಿದ್ಯಾ ಸಂಸ್ಥೆಯ ಶಿಕ್ಷಕಿಯರು ಉಪಸ್ಥಿತರಿದ್ದರು.