ಉಡುಪಿ : ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಗೂ ಅವರ ಕುಟುಂಬದ ಆಸ್ತಿ ವಿವರ ಸಲ್ಲಿಸಿದ್ದಾರೆ. ಅವರು ಸಲ್ಲಿಸಿದ ಆಸ್ತಿ ವಿವರ ಪ್ರಕಾರ ಕೋಟ ಕುಟುಂಬ ಕೋಟ್ಯಧಿಪತಿ ಅನ್ನೋದು ಗೊತ್ತಾಗಿದೆ. ಕೋಟ ಶ್ರೀನಿವಾಸ ಪೂಜಾರಿ, ಅವರ ಪತ್ನಿ ಸಹನಾ ಮಕ್ಕಳಾದ ಸ್ವಾತಿ, ಶಶಿಧರ್ ಹಾಗೂ ಶ್ರುತಿ ಅವರ ಹೆಸರಿನಲ್ಲಿ ಇರುವ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಅವರ ಕೈನಲ್ಲಿ 90 ಸಾವಿರ ನಗದು ಹೊಂದಿದ್ದರೆ, ಪತ್ನಿ ಸಹನಾ ಅವರ ಬಳಿ 20 ಸಾವಿರ ನಗದು ಇದೆ.
ಇನ್ನು ಕೋಟ ಶ್ರೀನಿವಾಸ ಪೂಜಾರಿಯವರ ಬ್ಯಾಂಕ್ ಹಾಗೂ ಚರಾಸ್ತಿ ವಿವರಗಳು ಕೂಡಾ ದೊಡ್ಡದಾಗಿಯೇ ಇದೆ.
- ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿಯಲ್ಲಿರುವ 90 ಸಾವಿರ ನಗದು ಹಾಗೂ ಚರಾಸ್ತಿ ಮೌಲ್ಯ 31,95,082 ( ಮುವತ್ತೊಂದು ಲಕ್ಷದ ತೊಂಬತೈದು ಸಾವಿರದ ಎಂಬತ್ತೆರಡು ರೂಪಾಯಿ )
- ಕೋಟ ಅವರ ಪತ್ನಿ ಸಹನಾ ಅವರ ಬಳಿ ಇರುವ 20 ಸಾವಿರ ನಗದು ಹಾಗೂ ಚರಾಸ್ತಿ 10,29,027 ( ಹತ್ತು ಲಕ್ಷದ ಇಪ್ಪತ್ತೊಂಬತ್ತು ಸಾವಿರದ ಇಪ್ಪತ್ತೇಳು ರೂಪಾಯಿ )
- ಮಗಳು ಸ್ವಾತಿ ಚರಾಸ್ತಿ 3,70,00 (ಮೂರು ಲಕ್ಷದ ಎಪ್ಪತ್ತು ಸಾವಿರ )
- ಮಗ ಶಶಿಧರ್ ಅವರ ಚರಾಸ್ತಿ 17,59,935 (ಹದಿನೇಳು ಲಕ್ಷದ ಐವತ್ತೊಂಬತ್ತು ಸಾವಿರದ ಒಂಬೈನೂರ ಮುವತ್ತೈದು ರೂಪಾಯಿ)
- ಮಗಳು ಶೃತಿ ಅವರ ಚರಾಸ್ತಿ 66, 446 ( ಅರುವತ್ತಾರು ಸಾವಿರದ ನಾನೂರ ಅರುವತ್ತಾರು )
- ಚರಾಸ್ತಿಯ ಒಟ್ಟು ಮೌಲ್ಯ 64,20,510 ( ಅರುವತ್ತ ನಾಲ್ಕು ಲಕ್ಷದ ಇಪ್ಪತ್ತು ಸಾವಿರದ ಐನೂರ ಹತ್ತು ರೂಪಾಯಿಗಳು)
ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬ ಸ್ಥಿರಾಸ್ತಿ ವಿವರ ಹೀಗಿದೆ:
- ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿಯಲ್ಲಿ 79,95,082 ಎಪ್ಪತ್ತೊಂಬತ್ತು ಲಕ್ಷದ ತೊಂಬತ್ತೈದು ಸಾವಿರದ ಎಂಬತ್ತೆರಡು ರೂಪಾಯಿ
- ಪತ್ನಿ ಸಹನಾ ಅವರ ಬಳಿ ಇರುವ ಸ್ಥಿರಾಸ್ತಿ 1,62,79,027 ( ಒಂದು ಕೋಟಿಯ ಅರುವತ್ತೆರಡು ಲಕ್ಷದ ಎಪ್ಪತ್ತೋಂಬತ್ತು ಸಾವಿರದ ಇಪ್ಪತ್ತೇಳು ರೂಪಾಯಿ)
- ಮಗಳು ಸ್ವಾತಿ ಅವರ ಬಳಿ ಇರುವ ಸ್ಥಿರಾಸ್ತಿ 3,70,00 ( ಮೂರು ಲಕ್ಷದ ಎಪ್ಪತ್ತು ಸಾವಿರ )
- ಮಗ ಶಶಿಧರ್ ಬಳಿ ಇರುವ ಸ್ಥಿರಾಸ್ತಿ 47,59,935 (ನಲುವತ್ತೇಳು ಲಕ್ಷದ ಐವತ್ತೊಂಬತ್ತು ಸಾವಿರದ ಒಂಬೈನೂರ ಮುವತ್ತೈದು ರೂಪಾಯಿ )
- ಮಗಳು ಶೃತಿ ಬಳಿ ಇರುವ ಸ್ಥಿರಾಸ್ಥಿ 66,466 ( ಅರುವತ್ತಾರು ಸಾವಿರದ ನಾನೂರ ಅರುವತ್ತಾರು )
- ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬದ ಒಟ್ಟು ಸ್ಥಿರಾಸ್ತಿ ಮೌಲ್ಯ 2,94,70,510 ( ಎರಡು ಕೋಟಿ ತೊಂಬತ್ತನಾಲ್ಕು ಲಕ್ಷದ ಎಪ್ಪತ್ತು ಸಾವಿರದ ಐನೂರ ಹತ್ತು ರೂಪಾಯಿ )