spot_img

ಸ್ವಿಟ್ಜರ್ಲ್ಯಾಂಡ್ ನ ಅನುಭವ ಈಗ ಮಂಗಳೂರಿನಲ್ಲಿ ಆರಂಭ : Snow Fantasy

ಮಂಗಳೂರು: ಭಾರತದ ಅತ್ಯಂತ ಪ್ರತಿಷ್ಠಿತ, ಹಿಮ ವಾತಾವರಣದ ಮತ್ತು ಮಂಜಿನ ವಿಶೇಷ ಅನುಭವ ನೀಡುವ ಸ್ನೋ ಫ್ಯಾಂಟಸಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಝ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ ಆರಂಭಗೊಂಡಿದೆ.

1000053463
1000053463

ಕೊಯಂಬತ್ತೂರು ಮತ್ತು ಕಲ್ಲಿಕೋಟೆ ನಂತರ ಮಂಗಳೂರಿನಲ್ಲಿ ಈ ಪಾರ್ಕ್ ಇವರ ಮೂರನೇ ಹೆಗ್ಗುರುತಾಗಿದೆ. ಅದಲ್ಲದೆ ಮಂಗಳೂರಿಗೆ ಇದು ಪ್ರಪ್ರಥಮಈ ಹಿಮ ಮಳಿಗೆಯೊಳಗೆ ಮಂಜು ಬೀಳುವ ಅನುಭವ, ಡಿಜೆ, ಕಾಫಿ ಶಾಪ್, ಹಿಮ ಪ್ರಾಣಿಗಳ ಚಿತ್ರಗಳನ್ನು ಆಸ್ವಾದಿಸುವ, ಹಾಗೆಯೇ ಹಿಮ ಶಿಖರಗಳ, ಹಿಮ ಕಣಿವೆಯೊಳಗೆ ಓಡಾಡುವ ಅನುಭವ ಅದ್ಭುತ.. ಮ್ಯಾಜಿಕಲ್ ಹಿಮಗಳು, ಹಿಮದ ಗುಡ್ಡೆ ಕಟ್ಟುವ ಆಟಗಳು… ಇನ್ನು ಅನೇಕ ರೀತಿಯ ವಿಶೇಷಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ.ಮಂಗಳೂರಿನ ಬಿಸಿಲಿನ ವಾತಾವರಣದಲ್ಲಿ ಒದ್ದಾಡುವ ಈ ಸಂದರ್ಭದಲ್ಲಿ ಮನೆ-ಮಂದಿ-ಮಕ್ಕಳನ್ನೆಲ್ಲ ಒಂದು ಅನುಭವವನ್ನು ಆಸ್ವಾದಿಸುವುದು ಒಳ್ಳೆಯದು ಎನ್ನುತ್ತಾರೆ ಸ್ನೋ ಫ್ಯಾಂಟಸಿಯ ಡೈರೆಕ್ಟರ್ ಆದಿತ್ಯ.

1000053467
1000053467

ಅಂತರರಾಷ್ಟ್ರೀಯ ಗುಣಮಟ್ಟದ ಈ ಸ್ನೋ ಫ್ಯಾಂಟಸಿ ಪ್ರವೇಶ ಪಡೆದವರಿಗೆ ಜಾಕೆಟ್, ಸಾಕ್ಸ್, ಬೂಟ್ ಮುಂತಾದವುಗಳನ್ನು ನೀಡಲಾಗುತ್ತದೆ. ಅವರ ಆರೋಗ್ಯದ ಕುರಿತು ಮತ್ತು ಅಪಾಯವನ್ನು ತಡೆಗಟ್ಟುವ ಎಲ್ಲಾ ಕಾರ್ಯಕ್ಷಮತೆಯನ್ನು, ಸೇಫ್ಟಿ ಫೀಚರ್ಸ್‌ಗಳನ್ನು ಅಳವಡಿಸಲಾಗಿದೆ.

ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಸಿ.ಓ.ಓ. ಜಯೇನ್ ನಾಯಕ್ ಮಾತನಾಡಿ, ಈ ಅನುಭವ ನಿಜವಾಗಿಯೂ ವಿಶೇಷ. ಸ್ನೋ ಫ್ಯಾಂಟಸಿ, ಫೆಂಟಾಸ್ಟಿಕ್ ಆಗಿದ್ದು ನಮ್ಮ ಮಾಲ್ ಅನ್ನು ಆಯ್ಕೆ ಮಾಡಿರುವುದು ಸಂತೋಷ ಎಂದು ಹರ್ಷ ವ್ಯಕ್ತಪಡಿಸಿದರು.ಸ್ನೋ ಫ್ಯಾಂಟಸಿಯ ವಿಶೇಷತೆಗಳ ಬಗ್ಗೆ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣುಶರ್ಮ ಮಾತನಾಡಿ, ಮಂಗಳೂರಿನ ಜನತೆ ತಮ್ಮ ಕಿಟ್ಟಿ ಪಾರ್ಟಿಗಳನ್ನು, ಬರ್ತ್ ಡೇ ಹಾಗೂ ಗೆಳೆಯರ ಆಟ- ಕೂಟಗಳನ್ನು ಗ್ರೂಪ್ ಬುಕಿಂಗ್ ಮೂಲಕ ನಡೆಸಿದರೆ ಅವರ ಸಂತೋಷ ದುಪ್ಪಟ್ಟಾಗುವುದು ಖಂಡಿತಾ ಎಂದರು.ಕಂಪನಿಯ ಇನ್ನೊಬ್ಬ ನಿರ್ದೇಶಕ ವಿಪಿನ್ ಝಕಾರಿಯ ಮಾತನಾಡುತ್ತಾ, ಈ ಪಾರ್ಕ್ ಮಕ್ಕಳಿಗೆ, ಯುವಕರಿಗೆ ಮತ್ತು ಎಲ್ಲಾ ವರ್ಗದ ಜನರಿಗೂ ಸಂತೋಷ ನೀಡುವ ಉದ್ದೇಶದಿಂದಾಗಿ ಆರಂಭವಾಗಿದೆ. ಈ ಪಾರ್ಕ್ ನಲ್ಲಿ ಯುವ ಜನತೆಗಾಗಿ ಹಲವು ಸಾಹಸ ಕ್ರೀಡೆಗಳನ್ನು ಅಳವಡಿಸಲಾಗಿದೆ ಎಂದರು.

ಅಂತರಾಷ್ಟ್ರೀಯ ಗುಣಮಟ್ಟದ ಸೌಂಡ್ ಸಿಸ್ಟಮ್, ಲೇಸರ್ ಶೋ, ಮ್ಯಾಜಿಕಲ್ ಸ್ನೋ ಫಾಲ್, ರೋಪ್ ವಾಕ್…. ಸ್ನೋ ಫ್ಯಾಂಟಸಿಯ ವಿಶೇಷಗಳು ಎನ್ನುತ್ತಾರೆ ನಿಯೋಸ್ನೋ ಎಮ್ಯೂಸ್ಮೆಂಟ್ ಆಂಡ್ ಪಾರ್ಕ್ ಇಂಡಿಯಾ (ಪ್ರೈ) ಲಿಮಿಟೆಡ್   ಕಂಪನಿಯ ಚೇರ್‌ ಮ್ಯಾನ್‌ ಹಾಗೂ ಮುಖ್ಯಸ್ಥ ಕ್ಯಾಪ್ಟನ್ . ಟಿ. ಎಸ್. ಅಶೋಕನ್.ಕಳೆದ 28 ವರ್ಷಗಳ ಅನುಭವ ಹಂಚಿಕೊಳ್ಳುತ್ತಾ, ಕೇರಳದಲ್ಲಿ ಪ್ರಪ್ರಥಮ ಎಮ್ಯೂಸ್ಮೆಂಟ್ ಪಾರ್ಕನ್ನು ಮಲಪ್ಪುರಂ ಜಿಲ್ಲೆಯಲ್ಲಿ ನೀಡಿದ ನಾವು ಮಂಗಳೂರಿಗೂ ಈ ಪ್ರಪ್ರಥಮ ಸ್ನೋ ಫ್ಯಾಂಟಸಿ ನೀಡುತ್ತಿದ್ದೇವೆ ಎಂದರು.

1000053462
1000053462

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು