ಇಂದು ತೆಳ್ಳಾರಿನಲ್ಲಿ ಜಲದುರ್ಗಾ ಗಾಣದ ನೈಸರ್ಗಿಕ ಪರಿಶುದ್ಧ ತೆಂಗಿನಎಣ್ಣೆಯ ಲೋಕಾರ್ಪಣೆ ಕಾರ್ಯಕ್ರಮವು ಜರುಗಿತು.
ದೀಪ ಪ್ರಜ್ವಲನ ದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಊರಿನ ಪ್ರಗತಿಪರ ಕೃಷಿಕರು ಹಾಗೂ ಹಿರಿಯರು ಆದ ಶ್ರೀ. ಕೃಷ್ಣ ಭಟ್ ಬಲಾಜೆ ಯವರು ಬಳಿಕ ಮಾತನಾಡಿ ತೆಳ್ಳಾರಿನಂತಹ ಗ್ರಾಮೀಣ ಪ್ರದೇಶದಲ್ಲಿ ಗಾಣದ ತೆಂಗಿನ ಎಣ್ಣೆಯ ಗೃಹ ಉದ್ಯಮದ ಘಟಕವು ಪ್ರಾರಂಭವಾಗಿದ್ದು ಸಂತಸದ ಸಂಗತಿ. ಮುಖ್ಯವಾಗಿ ಗುಣಮಟ್ಟದ ಪರಿಶುದ್ಧ ತೆಂಗಿನಎಣ್ಣೆಯನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಉದ್ಯಮವು ಯಶಸ್ವಿಯಾಗಲಿ ಎಂದು ಹಾರೈಸಿದರು. ದುರ್ಗ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ದೇವಕಿಯವರು ಮಾತನಾಡಿ ಉದ್ಯಮದ ಯಶಸ್ವಿಗೆ ಗ್ರಾಹಕರ ಬೆಂಬಲವು ಮುಖ್ಯ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ತಮ ಸೇವೆಯು ದೊರಕಿ ಉದ್ಯಮ ಯಶಸ್ವಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಕಾರ್ಕಳ ತಾಲೂಕಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಚಂದ್ರಹಾಸ ಶೆಟ್ಟಿ ಇನ್ನಾ ರವರು ಇಂದಿನ ಅರೋಗ್ಯವಂತ ಸಮಾಜಕ್ಕೆ ಗಾಣದ ತೆಂಗಿನ ಎಣ್ಣೆಯ ಅಗತ್ಯತೆ ಹಾಗೂ ಮಹತ್ವ ದ ಬಗ್ಗೆ ಸವಿವರವಾಗಿ ವಿವರಿಸಿದರು. ಮುಖ್ಯವಾಗಿ ಲಾಭದ ದೃಷ್ಟಿಯಲ್ಲಿ ಉದ್ಯಮವನ್ನು ನಡೆಸದೆ ಕಲಬೆರಕೆ ಇಲ್ಲದ ಪರಿಶುದ್ಧ ತೆಂಗಿನ ಎಣ್ಣೆಯನ್ನು ಗ್ರಾಹಕರಿಗೆ ಪರಿಚಯಿಸುವ ಮೂಲಕ ಹಂತ ಹಂತವಾಗಿ ಉದ್ಯಮದಲ್ಲಿ ಯಶಸ್ವಿಯಾಗಿ ಎಂದು ಹಾರೈಸಿದರು.
ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀ. ಕೆ. ಕೃಷ್ಣ ರವರು ನೂತನ ಉದ್ಯಮವು ಯಶಸ್ವಿಯಾಗಲಿ ಎಂದು ಹಾರೈಸಿದರು.ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ದಿನೇಶ್ ನಾಯಕ್,ಸಯ್ಯದ್ ತನ್ವಿರ್,ಪುರಸಭೆಯ ಮಾಜಿ ಸದಸ್ಯರಾದ ಶ್ರೀ. ಪ್ರಕಾಶ್ ರಾವ್,ಸತ್ಯ ನಾರಾಯಣ ಪಡ್ರೆ ಹಾಗೂ ಗ್ರಾಮದ ಕೃಷಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. “ಜಲದುರ್ಗಾ ಗಾಣದ ಎಣ್ಣೆ “ಘಟಕವನ್ನು ಮುನ್ನಡೆಸಲಿರುವ ಸತೀಶ್ ನಾಯಕ್ ರವರು ಸ್ವಾಗತಿಸಿ ವಂದಿಸಿದರು. ಕುಮಾರಿ ವಿನಯಾ ಕಾರ್ಯಕ್ರಮವನ್ನು ನಿರೂಪಿಸಿದರು.
ಪರಿಶುದ್ಧ ಹಾಗೂ ಉತ್ತಮ ಗುಣಮಟ್ಟದ ಗಾಣದ ಎಣ್ಣೆಯು “ಜಲದುರ್ಗಾ ಗಾಣದ ಎಣ್ಣೆ “ಯ ಘಟಕದಲ್ಲಿ ಲಭ್ಯವಿದ್ದು ಆಸಕ್ತಿಯುಳ್ಳವರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕ ಮಾಡಬಹುದು.
-ಸತೀಶ್ ನಾಯಕ್, ತೆಳ್ಳಾರು.ಮೊಬೈಲ್ :9449592782