spot_img

ನಾಳೆ ಅಯೋಧ್ಯ ಶ್ರೀರಾಮನಿಗೆ ಸೂರ್ಯ ತಿಲಕ :

ನಾಳೆ ಹಿಂದೂ ಧರ್ಮೀಯರ ಆರಾಧ್ಯ ದೈವ ಶ್ರೀರಾಮನ (Lord Rama) ಹಬ್ಬ. ದೇಶದಾದ್ಯಂತ ಶ್ರೀರಾಮ ನವಮಿಯನ್ನು (Rama Navami) ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಲ್ಲೂ ಈ ಬಾರಿಯ ರಾಮ ನವಮಿ ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಇನ್ನೂ ವಿಶೇಷವಾಗಿದೆ.

ಅಯೋಧ್ಯೆಯ ರಾಮ ಲಲ್ಲಾಗೆ ನಾಳೆ ಸೂರ್ಯ ತಿಲಕ

ಅಯೋಧ್ಯೆಯಲ್ಲಿ ರಾಮ ನೆಲೆಸಿದ ನಂತರ ಬರುತ್ತಿರುವ ಮೊದಲ ರಾಮ ನವಮಿ ಆಗಿರುವ ಕಾರಣ ಅದ್ಧೂರಿ ಆಚರಣೆ ಇಲ್ಲಿ ನೆರವೇರಲಿದೆ. ಈಗಾಗ್ಲೇ ಅದಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ನೆರವೇರಿವೆ. ನಾಳೆಯ ರಾಮ ನವಮಿಯಲ್ಲಿ ತುಂಬಾ ವಿಶೇಷವಾಗಿರುವುದು ಎಂದರೆ ‘ಸೂರ್ಯ ಅಭಿಷೇಕ/ ಸೂರ್ಯ ತಿಲಕʼ.

3 ರಿಂದ 5 ನಿಮಿಷಗಳ ಕಾಲ ರಾಮನ ಹಣೆಯಲ್ಲಿ ಸೂರ್ಯನ ಕಿರಣ

ಬಾಲ ರಾಮ ಲಲ್ಲಾನ ಜನ್ಮದಿನ ರಾಮ ನವಮಿಯಂದು ಅಂದರೆ ಏಪ್ರಿಲ್ 17ರಂದು ನೆರವೇರಲಿರುವ ರಾಮನವಮಿಯಂದು ಈ ಸುಂದರ ವಿಗ್ರಹದ ಹಣೆಯ ಮೇಲೆ 3 ರಿಂದ 5 ನಿಮಿಷಗಳ ಕಾಲ ಸೂರ್ಯನ ಕಿರಣಗಳು ಮಧ್ಯಾಹ್ನ 12:16 ಕ್ಕೆ ಬೀಳುತ್ತದೆ.

ಮೊದಲ ಬಾರಿಗೆ ಬಾಲರಾಮನ ಹಣೆಯಲ್ಲಿ ಸೂರ್ಯತಿಲಕ ಕಂಗೊಳಿಸಲಿದ್ದು, ಇದಕ್ಕೆ ಬೇಕಾದ ವಿಶಿಷ್ಟ ವೈಜ್ಞಾನಿಕ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಇನ್ನೂ ಪ್ರತಿವರ್ಷ ಸಹ ಸೂರ್ಯ ತಿಲಕದ ರಂಗು ನೀಡಲು ಈ ವ್ಯವಸ್ಥೆಯನ್ನು ಮಾಡಲಾಗಿದೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಆಸ್ಟ್ರೋಫಿಸಿಕ್ಸ್‌ ಸಹಭಾಗಿತ್ವದಲ್ಲಿ ಒಪ್ಟಿಕಾ ಎಂಬ ಕಂಪನಿ ಈ ಯೋಜನೆಯನ್ನು ರೂಪಿಸಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CBRI) ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ.

ಸೂರ್ಯ ತಿಲಕದಿಂದ ಬಿಸಿಯಾಗುವುದಿಲ್ಲ ವಿಗ್ರಹ

ಒಂದಿಷ್ಟು ನಿಮಿಷ ರಾಮನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲಿದ್ದು, ಈ ಕಿರಣಗಳಿಂದ ವಿಗ್ರಹ ಬೆಚ್ಚಗಾಗುವುದಿಲ್ಲ. ಶಾಖವನ್ನು ತಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ತಿಲಕವನ್ನು ಸುಗಮಗೊಳಿಸಲು ಸ್ಥಾಪಿಸಲಾದ ಆಪ್ಟೋಮೆಕಾನಿಕಲ್ ಸಿಸ್ಟಮ್ ಅತಿಗೆಂಪು ಫಿಲ್ಟರ್‌ನಿಂದ ಮಾಡಲ್ಪಟ್ಟಿದೆ. ಇದಕ್ಕೆ ನಿಖರ ಮಸೂರ ಮತ್ತು ಕನ್ನಡಿಗಳನ್ನು ಬಳಸಿ ವಿಶಿಷ್ಟ ವಿನ್ಯಾಸವನ್ನು ಒದಗಿಸಲಾಗಿದೆ.

ಈ ಅಂಶಗಳು ನೈಸರ್ಗಿಕ ಸೂರ್ಯನ ಬೆಳಕನ್ನು ಬಳಸಿಕೊಂಡು ದೈವಿಕ ಸಂಕೇತವಾಗಿ ಬಾಲರಾಮನ ಹಣೆಯ ಮೇಲೆ ಸೂರ್ಯತಿಲಕವನ್ನು ಉಂಟುಮಾಡುತ್ತವೆ ಮತ್ತು ಈ ವಿಶಿಷ್ಟ ವೈಜ್ಞಾನಿಕ ತಂತ್ರಜ್ಞಾನ ವಿಗ್ರಹವನ್ನು ಬಿಸಿಯಾಗದಂತೆ ನೋಡಿಕೊಳ್ಳುತ್ತದೆ.

ರಾಮ ನವಮಿಯಂದು ಸೂರ್ಯ ತಿಲಕವು ಯಾವುದೇ ಹೆಚ್ಚುವರಿ ಶಾಖವನ್ನು ಉಂಟುಮಾಡುವುದಿಲ್ಲ ಎಂದು ತಂತ್ರಜ್ಞಾನದ ಹೊಣೆಹೊತ್ತ ಒಪ್ಟಿಕಾ ಕಂಪನಿ ಹೇಳಿದೆ.

ಅತಿಗೆಂಪು ಫಿಲ್ಟರ್ ಅಳವಡಿಕೆ

ಒಂದೇ ಸ್ಥಳದಲ್ಲಿ ಮಸೂರಗಳು ಮತ್ತು ಕನ್ನಡಿಗಳ ಉಪಕರಣಗಳ ಮೂಲಕ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸುವ ಮೂಲಕ ಉಂಟಾಗುವ ತೀವ್ರವಾದ ಶಾಖದ ಬಗ್ಗೆ ತಿಳಿದಿರುವ ರೂರ್ಕಿ ಮೂಲದ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡವು ಮೊದಲ ಮಹಡಿಯಲ್ಲಿ ಅತಿಗೆಂಪು ಫಿಲ್ಟರ್ ಅನ್ನು ಇರಿಸಿದೆ.

ಇದು ಹೆಚ್ಚುವರಿ ಶಾಖದ ಉತ್ಪಾದನೆಯನ್ನು ತಡೆಯುತ್ತದೆ. ಇದರ ಮೂಲಕ ಸೂರ್ಯನ ಬೆಳಕು ‘ಗರ್ಭಗೃಹ’ ಪ್ರವೇಶಿಸಿ ರಾಮನ ಹಳೆಯ ಮೇಲೆ ಸೂರ್ಯನ ಕಿರಣಗಳು ರಾರಾಜಿಸಲಿವೆ.

ಸೂರ್ಯತಿಲಕ ಸಮಾರಂಭದ ಅವಧಿ

ರಾಮ ಲಲ್ಲಾನ ಜನ್ಮದಿನವನ್ನು ಆಚರಿಸಲು ಮುಹೂರ್ತವನ್ನು ಏಪ್ರಿಲ್ 17 ರಂದು ಮಧ್ಯಾಹ್ನ 12 ಮತ್ತು 40 ಸೆಕೆಂಡುಗಳಿಗೆ ನಿಗದಿಪಡಿಸಲಾಗಿದೆ, ‘ಸೂರ್ಯತಿಲಕ’ ಬೆಳಗ್ಗೆ 11.58 ಕ್ಕೆ ಪ್ರಾರಂಭವಾಗಲಿದೆ ಮತ್ತು ಮಧ್ಯಾಹ್ನ 12.03 ರವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸೋಮವಾರ, ರಾಮಮಂದಿರದಲ್ಲಿ ಈ ಕುರಿತಾದ ಪ್ರಯೋಗಗಳನ್ನು ನಡೆಸಲಾಗಿದೆ. ರಾಮ ಭಕ್ತರಿಗಾಗಿ ಪ್ರಸಾರ ಭಾರತಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದ್ದು, ಮನೆಯಲ್ಲೇ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

ಲೈವ್ ಟೆಲಿಕಾಸ್ಟ್ ಅನ್ನು ನೀವು ಎಲ್ಲಿ ವೀಕ್ಷಿಸಬಹುದು?

ಈಗ ರಾಮನವಮಿಯಂದು ಅಯೋಧ್ಯೆ ತಲುಪಲು ಸಾಧ್ಯವಾಗದೇ ಇದ್ದರೆ ಮನೆಯಲ್ಲಿ ಕುಳಿತು ಈ ಸೂರ್ಯ ಅಭಿಷೇಕ ಕಾರ್ಯಕ್ರಮವನ್ನು ವೀಕ್ಷಿಸಬಹುದು. ಈ ಸಂಪೂರ್ಣ ಕಾರ್ಯಕ್ರಮ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ ಎಂದು ಹೇಳಲಾಗಿದೆ. ಅಲ್ಲದೆ, ಅಯೋಧ್ಯೆ ಸೇರಿದಂತೆ ಹಲವು ನಗರಗಳಲ್ಲಿ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಅಯೋಧ್ಯೆಗೆ ತಲುಪಬಹುದು ಎಂದು ಹೇಳಲಾಗುತ್ತಿದೆ. ರಾಮನವಮಿ ಹಿನ್ನೆಲೆಯಲ್ಲಿ ದೇವಸ್ಥಾನದ ದರ್ಶನದ ಸಮಯವನ್ನು ಕೂಡ ಬದಲಾಯಿಸಲಾಗಿದೆ.

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು