spot_img

ಇಂದಿನ ಭವಿಷ್ಯ :

ಮೇಷ

ಅತಿಯಾದ ಕೋಪದಿಂದ ಸಣ್ಣಮಟ್ಟದ ವಿವಾದ ದೊಡ್ಡದಾಗಬಹುದು. ಹಣಕಾಸಿನ ವಿಚಾರದಲ್ಲಿ ಕುಟುಂಬದಲ್ಲಿ ಪರಸ್ಪರ ಅಸಮಾಧಾನವಿರುತ್ತದೆ. ಶಾಂತಿ ಸಹನೆಯಿಂದ ವರ್ತಿಸಿದರೆ ದೂರವಾಗಿದ್ದ ಅವಕಾಶವನ್ನು ಮರಳಿ ಪಡೆಯಬಹುದು. ಸೋದರಿಯ ಸಹಾಯದಿಂದ ಹಣಕಾಸಿನ ತೊಂದರೆ ಪರಿಹಾರಗೊಳ್ಳಲಿದೆ. ಸಂಗಾತಿಯೊಂದಿಗೆ ಶಾಂತಿಯಿಂದ ವರ್ತಿಸಿದರೆ ಕುಟುಂಬದಲ್ಲಿ ಸಂತಸದ ವಾತಾವರಣ ಉಂಟಾಗುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ವರ್ತನೆ ಬೇಸರ ಮೂಡಿಸುತ್ತದೆ. ಮಕ್ಕಳ ಜವಾಬ್ದಾರಿಯು ಹೆಚ್ಚಿನ ಖರ್ಚು ವೆಚ್ಚಗಳಿಗೆ ದಾರಿಯಾಗುತ್ತದೆ. ಉತ್ತಮ ಆರೋಗ್ಯವಿರುತ್ತದೆ. ಕುಟುಂಬದ ಹಿರಿಯರ ಆಶಯದಂತೆ ನಡೆದರೆ ಸುಖಕರ ಜೀವನ ನಿಮ್ಮದಾಗಿರುತ್ತದೆ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ವೃಷಭ

ಗಡಿಮೀರದ ಆತ್ಮವಿಶ್ವಾಸ ಒಳ್ಳೆಯದು. ಆದರೆ ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸಲು ವಿಫಲರಾಗುವಿರಿ. ಸಮಯವನ್ನು ಆಧರಿಸಿಕೊಂಡು ಕೆಲಸ ಕಾರ್ಯಗಳಲ್ಲಿ ತೊಡಗುವುದು ಒಳ್ಳೆಯದು. ಪ್ರೀತಿ ವಿಶ್ವಾಸದ ಮಾತುಗಳಿಂದ ಜನರ ಮನಸ್ಸನ್ನು ಗೆಲ್ಲುವಿರಿ. ದ್ವೇಷದ ಮನೋಭಾವನೆಯಿಂದ ಹೊರ ಬರುವುದು ಒಳ್ಳೆಯದು. ಗೆಲ್ಲಲೇಬೇಕೆಂಬ ಹಟದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಹಣಕಾಸಿನ ವಿಚಾರದಲ್ಲಿ ಬುದ್ದಿವಂತಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸಂಗಾತಿಯ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ. ಆತ್ಮೀಯರೊಂದಿಗೆ ಸಂತೋಷದಿಂದ ದಿನ ಕಳೆಯುವಿರಿ. ಪಾಲುದಾರಿಕೆ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ 4

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಬಿಳಿ

ಮಿಥುನ

ಮನದಲ್ಲಿ ಸಕಾರಾತ್ಮಕ ಚಿಂತನೆಗಳು ಇರಲಿವೆ. ಇದರಿಂದಾಗಿ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಸುಲಭದ ಜಯ ನಿಮ್ಮದಾಗಲಿದೆ. ವಿವಾಹಿತರಿಗೆ ಸಂಗಾತಿಯಿಂದ ಹಣಕಾಸಿನ ಸಹಾಯ ದೊರೆಯಲಿದೆ. ಕುಟುಂಬದ ಹಿರಿಯರ ಮನಸ್ಸಿಗೆ ನೋವುಂಟಾಗುವ ಮಾತನಾಡಲಿದ್ದೀರಿ. ಸದಾ ಕಾಲ ಯಾವುದಾದರೂಂದು ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಎದುರಾಗಲಿದೆ. ಮನದ ಬೇಸರ ಕಡೆಯಲು ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡುವಿರಿ. ಉದ್ಯೋಗದಲ್ಲಿ ಅಧಿಕಾರಿಯೊಂದಿಗೆ ಅನಾವಶ್ಯಕ ವಾದ ವಿವಾದ ಉಂಟಾಗಲಿದೆ. ಖರ್ಚು ವೆಚ್ಚಗಳಿಗೆ ಸರಿದೂಗುವ ಆದಾಯ ದೊರೆಯಲಿದೆ.

ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬೂದು

ಕಟಕ

ಅತಿಯಾದ ಆತುರ ಬೇಡ. ಕೈ ಕಾಲುಗಳಿಗೆ ಪೆಟ್ಟು ಬೀಳುವ ಸಂಭವವಿದೆ. ಬುದ್ದಿವಂತಿಕೆಯ ತೀರ್ಮಾನಗಳು ಜೀವನದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕುಟುಂಬದ ಹೆಚ್ಚಿನ ಜವಾಬ್ದಾರಿಯು ನಿಮ್ಮದಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸ್ನೇಹಿತರಿಂದ ಉತ್ತಮ ಸಹಾಯ ಸಹಕಾರ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಬಹುದು. ಕೆಲಸ ಕಾರ್ಯಗಳಿಗೆ ಹಿರಿಯ ಅಧಿಕಾರಿಗಳ ಪ್ರಶಂಸೆ ದೊರೆಯುತ್ತದೆ. ಕೌಟುಂಬಿಕ ವಿಚಾರಗಳನ್ನು ಯಾರಲ್ಲಿಯೂ ಹೇಳಿಕೊಳ್ಳದಿರಿ. ಮನದ ಬೇಸರವನ್ನು ನೀಗಿಸಲು ಮನರಂಜನಾ ಮಾಧ್ಯಮವನ್ನು ಅವಲಂಬಿಸುವಿರಿ. ದಂಪತಿ ನಡುವೆ ಇದ್ದ ಅನಾವಶ್ಯಕ ವಾದ ವಿವಾದ ಕೊನೆಗೊಳ್ಳಲಿವೆ.

ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಂದು

ಸಿಂಹ

ಸಂಗಾತಿಯ ಒಡನಾಟದಿಂದ ನೋವನ್ನು ಮರೆಯುವಿರಿ. ಉದ್ಯೋಗದಲ್ಲಿ ಎದುರಾಗುವ ವಿರೋಧವನ್ನು ದಿಟ್ಟತನದಿಂದ ಎದುರಿಸುವಿರಿ. ಸ್ತ್ರೀಯರಿಗೆ ವಿಶೇಷ ಫಲ ದೊರೆಯಲಿವೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಕುಟುಂಬದಲ್ಲಿ ಪರಸ್ಪರ ಅಸಹಕಾರ ಮನೋಭಾವನೆ ಇರಲಿದೆ. ವಿಶ್ರಾಂತಿ ಪಡೆಯಿರಿ. ಧೈರ್ಯದಿಂದ ಹೊಸ ಹಣಕಾಸಿನ ವ್ಯವಹಾರವನ್ನು ಆರಂಭಿಸುವಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 5

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ : ಕಪ್ಪು

ಕನ್ಯಾ

ಕುಟುಂಬದ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರೂ ಹಣಕಾಸಿನ ವಿಚಾರವನ್ನು ಇಷ್ಟಪಡುವುದಿಲ್ಲ. ಮಾನಸಿಕ ಒತ್ತಡವಿಲ್ಲದೆ ಸಂತೋಷದ ಜೀವನ ಇರಲಿದೆ. ಮೊದಲ ಆದ್ಯತೆಯನ್ನು ಸ್ವಂತ ಕೆಲಸ ಕಾರ್ಯಗಳಿಗೆ ನೀಡುವಿರಿ. ಸಂಗಾತಿ ಮತ್ತು ಮಕ್ಕಳನ್ನು ಬಿಟ್ಟು ಬೇರೆ ಯಾರನ್ನು ಸುಲಭವಾಗಿ ನಂಬುವುದಿಲ್ಲ. ಈ ದಿನ ಬಿಡುವೆ ಇಲ್ಲದಂತೆ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ತಿಳಿ ಹಸಿರು

ತುಲಾ

ಕುಟುಂಬದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಮಾನಸಿಕ ನೆಮ್ಮದಿ ಇರುವುದಿಲ್ಲ. ಅಪೂರ್ಣವಾಗಿದ್ದ ಸ್ವಂತ ಕೆಲಸ ಕಾರ್ಯಗಳನ್ನು ಪ್ರಯಾಸದಿಂದ ಪೂರ್ಣಗೊಳಿಸುವಿರಿ. ದಾಂಪತ್ಯದಲ್ಲಿ ಎದುರಾಗಿದ್ದ ಮನಸ್ತಾಪವು ಕೊನೆಗೊಳ್ಳಲಿದೆ. ಸಣ್ಣ ಪುಟ್ಟ ಕೆಲಸಗಳಾದರೂ ಹೆಚ್ಚಿನ ಶ್ರದ್ಧೆಯಿಂದ ಮಾಡಬೇಕಾಗುತ್ತದೆ. ಮಕ್ಕಳಿಗೆ ಸಂಬಂಧಪಟ್ಟ ವಿಚಾರದಲ್ಲಿ ಯಶಸ್ಸನ್ನು ಗಳಿಸುವಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು ಈಶಾನ್ಯ

ಅದೃಷ್ಟದ ಬಣ್ಣ: ನಸುಗೆಂಪು

ವೃಶ್ಚಿಕ

ಆತ್ಮೀಯರಿಂದ ಹಣಕಾಸಿನ ತೊಂದರೆಯು ಪರಿಹಾರಗೊಳ್ಳಲಿದೆ. ಕೋಪದ ಗುಣವನ್ನು ತೊರೆದಲ್ಲಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ತಪ್ಪು ಮಾಡಿದವರನ್ನು ಕ್ಷಮಿಸುವುದಿಲ್ಲ. ನಿಮ್ಮ ಮನಸ್ಸಿಗೆ ಸರಿ ಎನಿಸಿದಂತಹ ಕೆಲಸಗಳನ್ನಷ್ಟೇ ಮಾಡುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಮ್ಮೆಲ್ಲ ಅಭಿಪ್ರಾಯಗಳನ್ನು ಹಂಚಿಕೊಳ್ಳುವಿರಿ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಧನಸ್ಸು

ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಆ ವಿಚಾರವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವಿರಿ. ಸಾಲವಾಗಿ ಹಣವನ್ನು ತೆಗೆದುಕೊಳ್ಳುವುದಿಲ್ಲ. ಮನಸ್ಸಿಗೆ ಬೇಸರವೆನಿಸಿದರೆ ಆರಂಭಿಸಿದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವಿರಿ. ಪ್ರೀತಿ ವಿಶ್ವಾಸ ಗಳಿಸಿದವರ ಜೊತೆಯಲ್ಲಿ ಸಂತೋಷದಿಂದ ಕಾಲ ಕಳೆಯುವಿರಿ. ಕಷ್ಟಪಟ್ಟು ದುಡಿದ ಹಣವನ್ನು ಬೇರೆಯವರಿಗಾಗಿ ಖರ್ಚು ಮಾಡುವಿರಿ.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ

ಮಕರ

ಸೋಲಿನ ವೇಳೆ ಸಹನೆಯನ್ನು ಕಳೆದುಕೊಳ್ಳುವಿರಿ. ಚಾಡಿ ಮಾತನ್ನು ನಂಬಿದರೆ ವೈವಾಹಿಕ ಸಂಬಂಧದಲ್ಲಿ ತೊಂದರೆ ಉಂಟಾಗಬಹುದು. ಕುಟುಂಬದ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಸೋದರನ ಮಾತಿನಂತೆ ನಡೆದುಕೊಂಡು ಉತ್ತಮ ಆದಾಯವನ್ನು ಗಳಿಸುವಿರಿ. ಆರೋಗ್ಯದ ಬಗ್ಗೆ ಗಮನವಹಿಸಿ. ತಾಯಿ ಜೊತೆಯಲ್ಲಿ ಹೆಚ್ಚಿನ ವೇಳೆಯನ್ನು ಕಳೆಯುವಿರಿ. ಉದ್ಯೋಗದಲ್ಲಿ ಉಂಟಾಗುವ ಬದಲಾವಣೆಗಳು ಹೊಸ ಆಸೆ ಮೂಡಿಸುತ್ತದೆ.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಕುಂಭ

ಹಣಕಾಸಿನ ವ್ಯವಹಾರಗಳಲ್ಲಿ ಮಧ್ಯವರ್ತಿಗಳಾಗಬೇಡಿ. ಮಾಡದ ತಪ್ಪಿಗೆ ದಂಡ ತೆರಬೇಕಾಗುತ್ತದೆ. ಎಲ್ಲರೂ ಅಚ್ಚರಿಪಡುವಂತಹ ಯಶಸ್ಸನ್ನು ಗಳಿಸುವಿರಿ. ವಿದ್ಯಾರ್ಥಿಗಳು ನಿರೀಕ್ಷಿತ ಮಟ್ಟವನ್ನು ಸುಲಭವಾಗಿ ತಲುಪಲಿದ್ದಾರೆ. ಮಾತುಕತೆಯಿಂದ ಕೆಟ್ಟ ಹೆಸರನ್ನು ಗಳಿಸಬಹುದು. ಕುಟುಂಬದ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುವಿರಿ.

ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕೆಂಪು

ಮೀನ

ಕುಟುಂಬದ ಶ್ರೇಯೋಬಿವೃದ್ಧಿಗಾಗಿ ಕಷ್ಟಪಡುವಿರಿ. ಸಾಧಕ ಬಾಧಕಗಳನ್ನು ಅಂದಾಜು ಮಾಡಿ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಅತಿಯಾದ ಆಸೆಯಿಂದ ಯಾವುದೇ ಕೆಲಸ ಆರಂಭಿಸುವುದಿಲ್ಲ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕಾರಣ ನೆಮ್ಮದಿ ಇರುತ್ತದೆ. ಸಂಗಾತಿಯ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಿರಿ. ಎಲ್ಲರೊಂದಿಗೂ ನಗುನಗುತ್ತಾ ದಿನ ಕಳೆಯುವಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ನೇರಳೆ ಬಣ್ಣ

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು