ಕಾರ್ಕಳ : ಕಾರ್ಕಳದಲ್ಲಿ ದಿನಾಂಕ 22ರಂದು ದೇಶದ ಪ್ರಧಾನಿಯಾಗಿರುವ ಮೋದಿಯವರ ಪರವಾಗಿ ಕಾರ್ಕಳದ ಜನತೆ ಮೋದಿ ಮುಖವಾಡ ಹಾಕಿ ಕೊಂಡು ಅನಂತಶಯನ ದೇವಸ್ಥಾನದಿಂದ ವೆಂಕಟರಮಣ ದೇವಸ್ಥಾನದವರೆಗೆ ಕಾಲ್ನಡಿಗೆ ಜಾತವನ್ನು ಮಾಡಿದರು.
ಈ ಕಾರ್ಯಕ್ರಮದ ಕೊನೆಯಲ್ಲಿ ಮೋದಿ ಅಭಿಮಾನಿಗಳನ್ನು ಉದ್ದೇಶಿಸಿಕೊಂಡು ಹಿಂದೂ ಸನಾತನೀಯ ಕೇರಳದ ಭದ್ರಾನಂದ ಸ್ವಾಮೀಜಿಯವರು ಮೋದಿಗಾಗಿ ನಾವು ನಮಗಾಗಿ ಮೋದಿ ಎನ್ನುವಂತಹ ವಿಷಯದ ಮೂಲಕ ಮೋದಿ ಅನ್ನುವವರು ಕೇವಲ ಪಕ್ಷದ ಅಭ್ಯರ್ಥಿ ಮಾತ್ರ ಅಲ್ಲ ಭಾರತದ ಸಂಪತ್ತು. ಅವರಿಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸುವಂತೆ ಅಲ್ಲ ಇಡೀ ಭಾರತವನ್ನೇ ಗೆಲ್ಲಿಸಬೇಕು ಅವರ ವ್ಯಕ್ತಿತ್ವವನ್ನು ಗೆಲ್ಲಿಸಬೇಕು ಹಿಂದುತ್ವವನ್ನು ಗೆಲ್ಲಿಸಬೇಕು ಎನ್ನುವ ಸಂದೇಶವನ್ನು ನೀಡಿದರು.
ಕಾರ್ಕಳ ರಸ್ತೆ ಪೂರ್ತಿ ಮೋದಿ ಅಭಿಮಾನಿಗಳ ಘೋಷಣೆಗಳು ಜಿಂಕಾರಗೊಂಡಿತ್ತು.