ಉಡುಪಿ, ಏಪ್ರಿಲ್ 25: ಬಡಗುತಿಟ್ಟು ಯಕ್ಷಗಾನದ ಹಿರಿಯ ಭಾಗವತ ಸುಬ್ರಮಣ್ಯ ಧಾರೇಶ್ವರ (67) ವಿಧಿವಶರಾಗಿದ್ದಾರೆ. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಏಪ್ರಿಲ್ 25 ರಂದು ಬೆಳಗ್ಗೆ 4.30ಕ್ಕೆ ಬೆಂಗಳೂರಿನಲ್ಲಿರುವ ತಮ್ಮ ಪುತ್ರನ ನಿವಾಸದಲ್ಲಿ ನಿಧನರಾಗಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 46 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಭಾಗವತ ಸುಬ್ರಮಣ್ಯ ಧಾರೇಶ್ವರ ಅವರು ಕಾಳಿಂಗ ನಾವುಡರ ಅಗಲುವಿಕೆಯ ಬಳಿಕ ಉಂಟಾಗಬಹುದಿದ್ದ ನಿರ್ವಾತವನ್ನು ತುಂಬಲು ಯತ್ನಿಸಿದ್ದ ಭಾಗವತ ಶ್ರೇಷ್ಠ ಎಂದೆನಿಸಿಕೊಂಡಿದ್ದರು. ಮೂಲತಃ ಗೋಕರ್ಣ ಮೂಲದವಾರದ ಭಾಗವತ ಸುಬ್ರಮಣ್ಯ ಧಾರೇಶ್ವರ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.