spot_img

ಇಂದಿನ ಪಂಚಾಂಗ :

ಮೇಷ ರಾಶಿ
ಕುಟುಂಬದ ಒಟ್ಟು ಆದಾಯದಲ್ಲಿ ಪ್ರಗತಿ ಕಂಡುಬರುತ್ತದೆ. ಶುಭ್ರವಾದ ಮನಸ್ಸಿನಿಂದ ಜನರ ವಿಶ್ವಾಸ ಗೆಲ್ಲುವಿರಿ. ಹಣವನ್ನು ಉಳಿಸುವ ಯೋಜನೆಗೆ ಚಾಲನೆ ದೊರೆಯುತ್ತದೆ . ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಿರಿ. ವಾಹನಗಳ ಬಗ್ಗೆ ಆಸಕ್ತಿ ಕಡಿಮೆ. ಸಂತಾನಲಾಭವಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕಂತಹ ಫಲ ದೊರೆಯಲಿದೆ. ವಿವಾಹ ಕಾರ್ಯದಲ್ಲಿ ಅನಾವಶ್ಯಕ ಮನಸ್ತಾಪ ಇರುತ್ತದೆ. ಉದ್ಯೋಗದಲ್ಲಿ ಎಲ್ಲರ ಜೊತೆಯಲ್ಲಿ ಸ್ನೇಹ ಪ್ರೀತಿಯಿಂದ ವರ್ತಿಸುವಿರಿ. ಅನುಚಿತ ಮಾತುಕತೆಯಿಂದ ಬೇಸರದ ಸನ್ನಿವೇಶ ಎದುರಾಗಲಿದೆ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪುನಿರ್ಧಾಗಳನ್ನು ತೆಗೆದುಕೊಳ್ಳುವಿರಿ. ವಂಶಸ್ಥರ ಹಿರಿಯರ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ.

ಪರಿಹಾರ: ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ

ವೃಷಭ ರಾಶಿ
ನೀವು ಸಮಯೋಚಿತ ಮಾತುಕತೆಯಿಂದ ವಿರೋಧಿಗಳ ಮನಸ್ಸನ್ನು ಗೆಲ್ಲುವಿರಿ. ಯಾರ ಮಾತನ್ನೂ ಕೇಳದೆ ಮನದ ಮಾತಿಗೆ ಬೆಲೆ ನೀಡುವಿರಿ. ಕುಟುಂಬದಲ್ಲಿನ ವಾದ ವಿವಾದಗಳಿಗೆ ಕಡಿವಾಣ ಹಾಕುವಿರಿ. ಖರ್ಚುವೆಚ್ಚಗಳನ್ನು ಸರಿದೂಗಿಸುವಷ್ಟು ಆದಾಯ ಇರುತ್ತದೆ. ಕುಟುಂಬದಲ್ಲಿ ಆಶಾದಾಯಕ ಬದಲಾವಣೆಗಳು ನೆಮ್ಮದಿಯನ್ನು ನೀಡುತ್ತದೆ. ಉದ್ಯೋಗದಲ್ಲಿ ಆನುಕೂಲಕರ ಬದಲಾವಣೆಗಳು ಉಂಟಾಗುತ್ತದೆ. ವ್ಯಾಪಾರ ವ್ಯವಹಾರಗಳ ಆದಾಯದಲ್ಲಿ ಹೆಚ್ಚಳ ಉಂಟಾಗುತ್ತದೆ. ವಿದ್ಯಾರ್ಥಿಗಳು ದ್ವಂದ್ವ ಮನಸ್ಸಿನ ಕಾರಣ ಮನದಲ್ಲಿ ಆತಂಕ ಇರುತ್ತದೆ. ಮನದ ಬೇಸರದಿಂದ ಏಕಾಂಗಿತನವನ್ನು ಬಯಸುವಿರಿ. ಮಕ್ಕಳ ಜೊತೆಯಲ್ಲಿ ಕಿರು ಪ್ರವಾಸ ಕೈಗೊಳ್ಳುವಿರಿ.

ಪರಿಹಾರ: ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 12

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಮಿಥುನ ರಾಶಿ
ಯಾತ್ರಾಸ್ಥಳಕ್ಕೆ ಕುಟುಂಬದವರೊಡನೆ ಸಂಚಾರವಿರುತ್ತದೆ. ಹೆಚ್ಚಿನ ವರಮಾನವನ್ನು ಗುರಿಯಾಗಿಸುವ ಕಾರಣ ಉದ್ಯೋಗವನ್ನು ಬದಲಾಯಿಸುವಿರಿ. ಕುಟುಂಬದ ಹಿರಿಯರಿಗೆ ರಕ್ತಸಂಬಂದಿಕರಿಂದ ತೊಂದರೆ ಉಂಟಾಗುತ್ತದೆ. ಯಂತ್ರದಿಂದ ತೊಂದರೆ ಆಗಲಿದೆ ಎಚ್ಚರಿಕೆ ಇರಲಿ. ವೃತ್ತಿಕ್ಷೇತ್ರದಲ್ಲಿ ವಿಶೇಷ ಸ್ಥಾನ ಮಾನ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ನಷ್ಟ ಸಮ ಪ್ರಮಾಣದಲ್ಲಿ ಇರುತ್ತದೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನ ಲಭಿಸುತ್ತದೆ. ಮನದ ಇಚ್ಚೆಯಂತೆ ಮನೆ ಕಟ್ಟಿಸಲು ಹೆಚ್ಚಿನ ಹಣ ಬೇಕಾಗುತ್ತದೆ. ಪ್ರಾಚಿನ ಕಾಲದ ಮಾದರಿ ಜೀವನದ ಬಗ್ಗೆ ಅಧ್ಯಯನ ಮಾಡುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ತೋರುವಿರಿ. ಚಿನ್ನ ಬೆಳ್ಳಿಯ ವಸ್ತುಗಳಿಗೆ ಹೆಚ್ಚಿನ ಹಣ ವೆಚ್ಚವಾಗುತ್ತದೆ.

ಪರಿಹಾರ: ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 3

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ಕಟಕ ರಾಶಿ
ಆತುರದ ನಿರ್ಧಾರದಿಂದ ಕುಟುಂಬದ ವಿವಾದವೊಂದು ದೂರವಾಗುವುದು. ಗಣ್ಯವ್ಯಕ್ತಿಗಳ ಸಹಾಯದಿಂದ ಧಾರ್ಮಿಕ ಸಂಸ್ಥೆಯೊಂದರಲ್ಲಿ ಉದ್ಯೋಗ ಲಭಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಸೋದರರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಭೂ ಅಭಿವೃದ್ಧಿ ಕೆಲಸ ಕಾರ್ಯದಲ್ಲಿ ತಂದೆಯವರಿಗೆ ಸಹಾಯ ಮಾಡುವಿರಿ. ಮನಸ್ಸಿಗಾದ ಬೇಸರದಿಂದ ವೈರಾಗ್ಯದ ಭಾವನೆ ಉಂಟಾಗುತ್ತದೆ. ತೋಟಗಾರಿಕೆಯಲ್ಲಿ ಆಸಕ್ತಿ ಉಂಟಾಗಲಿದೆ. ಆತ್ಮೀಯರ ಹಣದ ಕೊರತೆ ನೀಗಿಸಲು ಪ್ರಯತ್ನಿಸುವಿರಿ. ತಾಯಿಯ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಖರ್ಚಿನ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಮಕ್ಕಳ ವಿಚಾರದಲ್ಲಿ ಶುಭಫಲಗಳು ದೊರೆಯುತ್ತವೆ.

ಪರಿಹಾರ: ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಧನಸ್ಸು
ಆತ್ಮವಿಶ್ವಾಸದ ಕೊರತೆಯಿಂದ ಸಭೆ ಸಮಾರಂಭಗಳಿಂದ ದೂರ ಉಳಿಯುವಿರಿ. ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನೆರವೇರಿಸಲು ವಿಫಲರಾಗುವಿರಿ. ಖರ್ಚು ವೆಚ್ಚಗಳು ಮಿತಿ ಮೀರುವ ಸಾಧ್ಯತೆಗಳಿವೆ. ದಿನಾಂತ್ಯಕ್ಕೆ ಹಣದ ಕೊರತೆ ನಿಮ್ಮನ್ನು ಕಾಡುತ್ತದೆ. ದಾಂಪತ್ಯದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಇರಲಿದೆ. ಮಕ್ಕಳ ವಿದ್ಯಾಭ್ಯಾಸ ಅಥವಾ ವಿವಾಹಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಕಂಡು ಬರುತ್ತದೆ. ಉದ್ಯೋಗದಲ್ಲಿನ ಒತ್ತಡದಿಂದ ಕುಟುಂಬದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯದ ಬಗ್ಗೆ ಗಮನವಹಿಸಿ. ಅವಿವಾಹಿತರು ಗೊಂದಲದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಯಾವುದೇ ವಿಚಾರವಾದರೂ ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ಆತ್ಮೀಯರ ಆಗಮನದಿಂದ ಮನಸ್ಸಿಗೆ ಸಂತಸ ಉಂಟಾಗುತ್ತದೆ. ನಿಮ್ಮ ತಪ್ಪಿಗೆ ಬೇರೆಯವರನ್ನು ದೂಷಿಸುವಿರಿ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಪ್ಪು

ಮಕರ
ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತ ಸವಾಲುಗಳು ಎದುರಾಗಲಿವೆ. ಕೊಂಚ ತಡವಾದರೂ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳಿದ್ದರೂ ದುಡುಕು ಮಾತಿನಿಂದ ವಿವಾದಕ್ಕೆ ಒಳಗಾಗುವಿರಿ. ನಂಬಲು ಸಾಧ್ಯವಾಗದ ಮೂಲದಿಂದ ಹಣದ ಸಹಾಯ ದೊರೆಯುತ್ತದೆ. ಸುಲಭವಾಗಿ ನಿಮ್ಮ ಮನದ ಇಚ್ಛೆಗಳೆಲ್ಲ ನೆರವೇರುತ್ತದೆ. ಉದ್ಯೋಗದಲ್ಲಿ ಉತ್ತಮ ವೇತನ ಲಭಿಸುತ್ತದೆ. ಸಂಗಾತಿ ಮತ್ತು ಮಕ್ಕಳೊಂದಿಗೆ ಸಂತಸದಿಂದ ದಿನ ಕಳೆಯುವಿರಿ. ಕುಟುಂಬದ ಹಿರಿಯರ ಹಣದಲ್ಲಿ ನಿಮಗೆ ಸಮಪಾಲು ಲಭಿಸುತ್ತದೆ. ಸ್ವಂತ ಮನೆ ಕೊಳ್ಳುವ ಆಸೆ ನೆರವೇರಲಿದೆ.
ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ತಿಳಿ ಹಸಿರು

ಕುಂಭ
ಕುಟುಂಬದಲ್ಲಿ ಒಮ್ಮತದ ಸನ್ನಿವೇಶ ಇರುವುದಿಲ್ಲ. ಕುಟುಂಬದ ಹಣಕಾಸಿನ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವಿರಿ. ಉದ್ಯೋಗ ಬದಲಿಸುವ ಕಾರಣ ಹೆಚ್ಚಿನ ವೇತನ ಮತ್ತು ಉನ್ನತ ಹುದ್ದೆ ದೊರೆಯುತ್ತದೆ. ನಿಮ್ಮಲ್ಲಿರುವ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಆತ್ಮೀಯರ ಸಲಹೆಯನ್ನು ಒಪ್ಪುವುದರಿಂದ ಅನುಕೂಲವಾಗುತ್ತದೆ. ನಿಮ್ಮ ಸುಧೀರ್ಘ ಮಾತುಕತೆ ಎಲ್ಲರಲ್ಲೂ ಬೇಸರ ಮೂಡಿಸುತ್ತದೆ. ಆತ್ಮೀಯರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸುವುದಿಲ್ಲ. ಇದರಿಂದ ಆತಂಕದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಸಂಗಾತಿ ಮತ್ತು ಮಕ್ಕಳ ಬೇಡಿಕೆಗಳನ್ನು ಪೂರೈಸಲು ಸಫಲರಾಗುವಿರಿ. ಹೊಗಳಿಕೆಯ ಮಾತಿಗೆ ಸುಲಭವಾಗಿ ಮಣಿಯುವಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರ ಧರಿಸಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನಸುಗೆಂಪು

ಮೀನ
ನಿಮ್ಮ ಕೆಲಸ ಕಾರ್ಯಗಳು ಮತ್ತು ತೀರ್ಮಾನಗಳ ಬಗ್ಗೆ ಹೆಚ್ಚಿನ ನಂಬಿಕೆ ಇರುತ್ತದೆ. ಮೊದಲೇ ನಿರ್ಧರಿಸಿದ್ದ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಬದಲಿಸುವಿರಿ. ಅನಗತ್ಯವಾದ ಖರ್ಚು ವೆಚ್ಚಗಳು ಬೇಸರವನ್ನು ಮೂಡಿಸುತ್ತದೆ. ಹಣದ ಕೊರತೆ ಇರಲಿದೆ. ಕುಟುಂಬದ ಮಂಗಳ ಕಾರ್ಯಕ್ರಮವನ್ನು ಮುಂದೂಡಬೇಕಾಗುತ್ತದೆ. ದಂಪತಿ ನಡುವೆ ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ಯೋಚನೆ ಕಡಿಮೆ ಮಾಡಿದರೆ ಮಾತ್ರ ಉತ್ತಮ ಆರೋಗ್ಯ ನಿಮ್ಮದಾಗಲಿದೆ. ಬೇರೆಯವರ ತಪ್ಪನ್ನು ಮನ್ನಿಸಿದರೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ನಿಮಗೆ ಇಷ್ಟವೆನಿಸುವಂತಹ ಹೊಸ ವಾಹನ ಕೊಳ್ಳುವಿರಿ.
ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿ

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು