ಕಾರ್ಕಳ : ಕಾರ್ಕಳ ನಗರ ಪ್ರದೇಶದ ಕಾಲೋನಿಗಳಿಗೆ ಮತ್ತು ಹುಲಿ ಕುಣಿತ ಕಲಿಯುತ್ತಿರುವಂತಹ ಮಕ್ಕಳಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ವಾಗುವ ದೃಷ್ಟಿಕೋನದಿಂದ ಪುಸ್ತಕ ಮತ್ತು ಕೊಡೆ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಇಂದು
ಬೋಳ ಸುರೇಂದ್ರ ಕಾಮತ್ ಚಾರಿಟೇಬಲ್ ಟ್ರಸ್ಟ್ ಮತ್ತು ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ದಾಮೋದರ್ ಕಾಮತ್ ಅವರು ವಹಿಸಿಕೊಂಡಿದ್ದರು, ಅತಿಥಿ ಸ್ಥಾನವನ್ನು ಪ್ರಶಾಂತ್ ಕಾಮತ್ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಕಾಶ್ರಾ ವ್, ಕಾರ್ಯಕ್ರಮದ ಪ್ರಸ್ತಾವನೆ ಶ್ರೀಮತಿ ಕವಿತಾ ಹರೀಶ್ ಹಾಗೂ ಧನ್ಯವಾದಗಳು ಶ್ರೀಮತಿ ರಮಿತಾಶೈಲೇಂದ್ರ ನೆರವೇರಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಕಳ ಟೈಗರ್ಸ್ ತಂಡದ ಸರ್ವ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.