spot_img

ಮನೆಯ ಮೇಲೆಯೇ ಕೃಷಿ ಮಾಡಿ ತಿಂಗಳಿಗೆ 60 ಸಾವಿರ ಸಂಪಾದನೆ ಮಾಡುತ್ತಿರುವ ಮಹಿಳೆ! ಗಿಡಕ್ಕೆ ಮುಗಿಬಿದ್ದ ಜನ

ನಮ್ಮಲ್ಲಿ ಪ್ರತಿಭೆ ಇದ್ದರೆ ಅದಕ್ಕೊಂದು ಸೂಕ್ತ ವೇದಿಕೆ ಇದ್ದೇ ಇರಲಿದೆ. ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಇದ್ದರೂ ಜಾಗ ಇಲ್ಲ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನುವವರು ಅನೇಕ ಜನರು ಇದ್ದಾರೆ. ಅದರಲ್ಲೂ ನಗರಕ್ಕೆ ಬೇರೆ ಬೇರೆ ಕಾರಣಕ್ಕಾಗಿ ವಲಸೆ ಹೋದವರು ಕಾಲ ಕ್ರಮೇಣ ತಮ್ಮ ಹುಟ್ಟೂರಿನ ಕೃಷಿಗೆ ಕೊರೊನಾ ಕಾಲಾವಧಿಯಲ್ಲಿ ಒಗ್ಗಿಕೊಂಡವರು ಇದ್ದಾರೆ.
ಕೊರೊನಾ ಲಾಕ್ ಡೌನ್ ಆದ ಬಳಿಕ ಕೃಷಿಯತ್ತ ಒಲವು ಹೊಂದುವವರ ಪ್ರಮಾಣ ಕೂಡ ಅಧಿಕವಾಗುತ್ತಲೇ ಇದೆ. ಕಡಿಮೆ ಆದಾಯ ಇದೆ ಜಾಗ ಇಲ್ಲ ಏನಾದರೂ ಕೃಷಿ ಮಾಡಬೇಕು ಎನ್ನುವವರು ಮಲ್ಲಿಗೆ ಕೃಷಿ ಮಾಡಬಹುದಾಗಿದೆ.

ಮಲ್ಲಿಗೆಯ ಘಮ ನಮಗೆಲ್ಲ ತಿಳಿದೆ ಇದೆ. ಈ ಮಲ್ಲಿಗೆ ಹೂವಿಗೆ ರಾಜ್ಯದ ನಾನಾ ಕಡೆಯಿಂದ ಬೇಡಿಕೆ ಇದ್ದೇ ಇರುತ್ತದೆ. ಮದುವೆ ಇತರ ಕಾರ್ಯಕ್ರಮದಿಂದ ಹಿಡಿದು ಅಲಂಕಾರಿಕವಾಗಿ ದೇವರಿಗೂ ಕೂಡ ಸಮರ್ಪಣೆ ಮಾಡುತ್ತಾರೆ. ಈ ಹೂವಿಗೆ ಎಲ್ಲ ಕಾಲಕ್ಕೂ ಏಕ ರೀತಿಯ ಬೆಲೆ ಇಲ್ಲದಿದ್ದರೂ ಕೆಲವೊಂದು ಸಂದರ್ಭ ಅಟ್ಟಿಗೆ ಸಾವಿರಾರು ರೂಪಾಯಿ ಸಿಗಲಿದೆ ಎನ್ನಬಹುದು. ಹಾಗಾದರೆ ಇದು ಜಾಗ ಇಲ್ಲದೆ ಕೃಷಿ ಮಾಡಬಹುದೇ ಎಂದು ನಿಮಗೂ ಅನಿಸಬಹುದು.
ತಾರಸಿ ತೋಟ:
ಮಲ್ಲಿಗೆಯನ್ನು ಒಂದು ತೋಟವಾಗಿ ಕೂಡ ಕೃಷಿ ಮಾಡಬಹುದು ಆದರೆ ಅದಕ್ಕೆ ಅಧಿಕ ಬಂಡವಾಳ ಹಾಗೂ ಜಾಗ ಅಗತ್ಯವಾಗಿ ಬೇಕು ಆದರೆ ನೀವು ಸಣ್ಣ ಪ್ರಮಾಣದಲ್ಲಿ ಇದನ್ನು ಕೃಷಿಯಾಗಿ ಸ್ವೀಕಾರ ಮಾಡಬಹುದು ಅದಕ್ಕೆ ನಿಮ್ಮ ಮನೆಯ ಮೇಲೆ ತಾರಸಿ ತೋಟ (Terrace Garden) ಮಾಡಿ ಪಾಟ್ ನಲ್ಲಿ ಗಾರ್ಡನ್ ಮಾಡಬಹುದು. ಆಗ ನೀವು ಪೂರ್ತಿಯಾಗಿ ಇದೇ ಕೃಷಿ ಮಾಡಬೇಕು ಎಂದಿಲ್ಲ ಬದಲಿಗೆ ಬೇರೆ ಮುಖ್ಯ ಕೆಲಸದ ಜೊತೆಗೆ ಉಪವೃತ್ತಿಯಾಗಿ ಮಲ್ಲಿಗೆ ಕೃಷಿಯನ್ನು ನಿಮ್ಮ ಮನೆಯ ತಾರಸಿಯಲ್ಲಿ ಮಾಡಬಹುದು.

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು