spot_img

ಎರಡು ಕೈಗಳಿಲ್ಲದ ಯುವಕನಿಗೆ ಸಿಕ್ತು 4 ಚಕ್ರಗಳ ವಾಹನ ಚಾಲನೆಗೆ ಲೈಸೆನ್ಸ್

ಎರಡು ಕೈಗಳಿಲ್ಲದೇ ಕಾಲುಗಳಿಂದಲೇ ವಾಹನ ಚಾಲನೆ ಮಾಡ್ತಿದ್ದ ಯುವಕನಿಗೆ ನಾಲ್ಕು ಚಕ್ರಗಳ ವಾಹನ ಚಾಲನೆಗೆ ಈಗ ಪರವಾನಗಿ ಸಿಕ್ಕಿದೆ. ಸೀಟು ಬೆಲ್ಟ್ ಧರಿಸಿ ಕಾಲಿನಿಂದಲೇ ಯುವಕ ವಾಹನ ಚಾಲನೆ ಮಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ.
ಚೆನ್ನೈ: ಎರಡು ಕೈಗಳಿಲ್ಲದೇ ಕಾಲುಗಳಿಂದಲೇ ವಾಹನ ಚಾಲನೆ ಮಾಡ್ತಿದ್ದ ಯುವಕನಿಗೆ ನಾಲ್ಕು ಚಕ್ರಗಳ ವಾಹನ ಚಾಲನೆಗೆ ಈಗ ಪರವಾನಗಿ ಸಿಕ್ಕಿದೆ. ಸೀಟು ಬೆಲ್ಟ್ ಧರಿಸಿ ಕಾಲಿನಿಂದಲೇ ಯುವಕ ವಾಹನ ಚಾಲನೆ ಮಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ವಿದ್ಯುತ್ ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡಿದ್ದ ಥಾನ್ಸೆನ್ ಕೆ ಎಂಬುವವವರೇ ಈ ರೀತಿ ಕೈಗಳಿಲ್ಲದಿದ್ದರು ವಾಹನ ಪರವಾನಗಿ ಪಡೆದ ಸಾಹಸಿ ಯುವಕ.
ಚೆನ್ನೈನ ಕೆ.ಕೆ.ನಗರದಲ್ಲಿರುವ ಸರ್ಕಾರಿ ಇನ್‌ಸ್ಟಿಟ್ಯೂಟ್ ಆಫ್ ರಿಹ್ಯಾಬಿಲಿಟೇಶನ್ ಮೆಡಿಸಿನ್‌ನಲ್ಲಿ ಥಾನ್ಸೆನ್ ಕೆ ಅವರು ತಮ್ಮ ಕೆಂಪು ಸ್ವಿಫ್ಟ್‌ ಕಾರಿನ ಕೀಯನ್ನು ತಿರುಗಿಸಲು ತಮ್ಮ ಕಾಲುಗಳನ್ನು ಬಳಸಿ ಸ್ಟೇರಿಂಗ್ ಮೇಲೆ ಕಾಲುಗಳನ್ನು ಇರಿಸಿ ಸೀಟ್ ಬೆಲ್ಟ್ ಧರಿಸಿ ವಾಹನ ಚಾಲನೆ ಮಾಡುತ್ತಿರುವ ದೃಶ್ಯಗಳನ್ನು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಖುಷಿ ಪಟ್ಟಿದ್ದಾರೆ. ಇತ್ತ ಥಾನ್ಸೆನ್ ಅವರು ತಮಿಳುನಾಡಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದ ಎರಡೂ ಕೈಗಳಿಲ್ಲದ ಮೊದಲ ವ್ಯಕ್ತಿ ಎನಿಸಿದ್ದಾರೆ.

ಇನ್‌ಸ್ಟಿಟ್ಯೂಟ್ ಆಫ್ ರಿಹ್ಯಾಬಿಲಿಟೇಶನ್ ಸೆಂಟರ್‌ನ ವೈದ್ಯರು ಆತ ಸಮರ್ಥನಿದ್ದಾನೆ ಎಂದು ಸರ್ಟಿಫಿಕೇಟ್ ನೀಡಿದ ನಂತರ ಉತ್ತರ ಚೆನ್ನೈನ ಆರ್‌ಟಿಒ ಅಧಿಕಾರಿಗಳು ಥಾನ್ಸನ್‌ಗೆ 10 ವರ್ಷಗಳ ಅವಧಿಗೆ ವಾಹನ ಪರವಾನಗಿಯನ್ನು ನೀಡಿದ್ದಾರೆ. ನಾನು ವಾಹನ ಚಾಲನೆ ಮಾಡುವುದಕ್ಕೆ ಉತ್ಸಾಹಿತನಾಗಿದ್ದು, ಈ ವಾಹನ ಪರವಾನಗಿ ನನಗೆ ಚಲನಶೀಲತೆ, ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ನೀಡಿದೆ ಎಂದು ಅವರು ತಮ್ಮ ಈ ಸಾಧನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು