ಚೆನ್ನೈ : ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ಟೀಕೆಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ನಾನು ಡಾರ್ಕ್ ಸ್ಕಿನ್ ಭಾರತೀಯ ಎಂದು ಹೇಳುವ ಮೂಲಕ ಪಿತ್ರೋಡಾಗೆ ತಿರುಗೇಟು ಕೊಟ್ಟರು.
ಯಾಕೆಂದರೆ ಆಫ್ರಿಕನ್ನರು, ಚೈನೀಸ್, ಅರಬ್ಬರು, ಬಿಳಿಯರು ಇದನ್ನು ನಾನು ತಪ್ಪು ಎಂದು ಹೇಳುತ್ತಿಲ್ಲ, ಪರವಾಗಿಲ್ಲ. ಅವರು ತಮ್ಮದೇ ಆದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊಂದಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ.
ಆದರೆ ಅವರ ಅರ್ಥವೇನೆಂದರೆ, ಯಾರೋ ನಮ್ಮ ದೇಶವನ್ನು ಆಕ್ರಮಿಸಿದ್ದಾರೆ ಮತ್ತು ನಾವು ಆ ದಾಳಿಕೋರರ ವಂಶಸ್ಥರು. ಅದಕ್ಕಾಗಿಯೇ ಪಶ್ಚಿಮ ಅರಬ್, ಈಶಾನ್ಯ ಅವರು ಚೈನೀಸ್ ಎಂದು ಕರೆಯುತ್ತಾರೆ. ಉತ್ತರವನ್ನು ಅವರು ಬಿಳಿಯರು ಮತ್ತು ದಕ್ಷಿಣವನ್ನು ಅವರು ಆಫ್ರಿಕನ್ನರು ಎಂದು ಕರೆಯುತ್ತಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ಅದಕ್ಕಾಗಿಯೇ ನಾನು ಈಗ ನನ್ನ ಎಕ್ಸ್ ಖಾತೆಯಲ್ಲಿಯೂ ಉಲ್ಲೇಖಿಸಿದ್ದೇನೆ ಎಂದರು.
ಸದ್ಯ ಸ್ಯಾಮ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದು, ನಾಯಕರು ಸೋಶಿಯಲ್ ಮೀಡಿಯಾದಲ್ಲಿ ಕೈ ನಾಯಕನ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.
ಭಾರತದ ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ ಕಾಣಿಸುತ್ತಾರೆ. ಉತ್ತರ ಭಾರತದವರು ಬಹುಶಃ ಬಿಳಿಯರಂತೆ ಕಂಡರೆ, ದಕ್ಷಿಣ ಭಾರತದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ ಎಂದು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದರು.