ಕೋಟ : ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಪಡೆದು ದಾಸ್ತಾನಿರಿಸಿದ ರೈಸ್ ಇಂಡಸ್ಟ್ರೀಸ್‌ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಿಬ್ಬಂದಿ ಮತ್ತು ತಹಶೀಲ್ದಾರರು ದಾಳಿ ನಡೆಸಿದ ಘಟನೆ ಬ್ರಹ್ಮಾವರ ತಾಲೂಕುನಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಉಡುಪಿ ಆಹಾರ ಉಪನಿರೀಕ್ಷಕರಾದ ಜಯಮಾಧವ ಹಾಗೂ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಕೋಟ ಠಾಣೆ ಉಪನಿರೀಕ್ಷಕ ತೇಜಸ್ವಿ ಜತೆಯಾಗಿ ದಾಳಿ ನಡೆಸಿ, 540 ಕೆ.ಜಿ. ಅಕ್ಕಿ ವಶ ಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ಕೋಟ ಕಂದಾಯ ನಿರೀಕ್ಷಕರಾದ ಮಂಜುನಾಥ ಅವರು ಮೇಲಧಿ ಕಾರಿಯವರ ಸೂಚನೆಯಂತೆ ರೈಸ್ ಇಂಡಸ್ಟ್ರೀಸ್‌ಗೆ ದಾಳಿ ನಡೆಸಿ ಜಿಪಿಎಸ್ ಫೊಟೋ ತೆಗೆಯಲು ಮುಂದಾದಾಗ ಸ್ಥಳೀಯರಾದ ಪ್ರಭಾಕರ ಅವರು ಮೊಬೈಲ್ ಫೋನನ್ನು ಎಳೆದು ಇಲಾಖಾ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.