ಉಡುಪಿ : ತಾಲೂಕು ಪಂಚಾಯತ್ ಉಡುಪಿ,ತಾಲೂಕು ಸ್ವೀಪ್ ಸಮಿತಿ ಹಾಗೂ ಎನ್.ಆರ್.ಎಲ್. ಎಮ್ ಘಟಕ ಸಹಯೋಗದಲ್ಲಿ ಮಲ್ಪೆ ಬೀಚ್ ನಲ್ಲಿ ಮತದಾರರಲ್ಲಿ ಚುನಾವಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಆಟೋಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರತೀಕ್ ಬಾಯಲ್ ಇವರು ಕಾರ್ಯಕ್ರಮ ಉದ್ಘಾಟಿಸಿದರು.
ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ದೇವರಾಜ್ ಇವರು ನೆರೆದಿದ್ದವರಿಗೆ ಕಡ್ಡಾಯ ಮತದಾನದ ಅಂಗವಾಗಿ ಪ್ರತಿಜ್ಞಾವಿಧಿ ಭೋದಿಸಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಯವರು, ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕರಾದ ರಾಮ್ದಾಸ್,ಕಾಪು ತಾ.ಪಂ ಸಹಾಯಕ ನಿರ್ದೇಶಕಾದ ಜೇಮ್ಸ್ ಡಿಸಿಲ್ವ,ಡಿಡಿಪಿಐ ಉಪ ನಿರ್ದೇಶಕರಾದ ಗಣಪತಿ , ಸ್ವ-ಸಹಾಯ ಸಂಘದ ಸದಸ್ಯರು ಪ್ರವಾಸಿಗರು ಉಪಸ್ಥಿತರಿದ್ದರು.