ಮೇ 12-18ರವರೆಗಿನ ವಾರ ಭವಿಷ್ಯ: ಈ ವಾರ ವೃಷಭ, ಕರ್ಕ ರಾಶ ರಾಶಿಯವರೇ ಜಾಗ್ರತೆ, 12 ರಾಶಿಗಳ ಸಂಪೂರ್ಣ ರಾಶಿಫಲ
ಮೇಷ ರಾಶಿ
ಈ ವಾರ ಮೇಷ ರಾಶಿಯವರೇ ಜಾಗ್ರತೆವಹಿಸಿ. ಕೆಲವೊಂದು ಸಮಸ್ಯೆ ನಿಮಗೆ ತುಂಬಾ ಕಳವಳ ಉಂಟು ಮಾಡಬಹುದು. ವೃತ್ತಿ ಬದುಕಿನಲ್ಲಿ ಒತ್ತಡ ಹಚ್ಚಿರಲಿದೆ, ನೀವು ಕೆಲಸ ಮತ್ತು ವೈಯಕ್ತಿಕ ಜೀವನದ ಬಗ್ಗೆ ಸಮತೋಲನ ಕಾಪಾಡಲು ಸಹಕರಿಸಿ. ಇನ್ನು ವ್ಯಾಪಾರಸ್ಥರು ಜಾಗ್ರತೆವಹಿಸಬೇಕು, ಇನ್ನು ಉದ್ಯಮಿಗಳು ಯಾವುದೇ ವ್ಯವಹಾರ ಮಾಡಲು ಹೋಗದಿರಿ. ಆರೋಗ್ಯ ಸಮಸ್ಯೆವಿರಬಹುದು. ಈ ವಾರ ನಿಮಗೆ ಅದೃಷ್ಟದ ಬಣ್ಣ ಗುಲಾಬಿ ಹಾಗೂ ಅದೃಷ್ಟದ ದಿನ ಬುಧವಾರವಾಗಿದೆ.
ವೃಷಭ ರಾಶಿ
ಈ ವಾರ ನಿಮಗೆ ಅಷ್ಟೊಂದು ಅನುಕೂಲಕರವಲ್ಲ. ನೀವು ನಿಮ್ಮ ವರ್ತನೆ ಬಗ್ಗೆ ಗಮನಹರಿಸಬೇಕು. ನೀವು ಕೆಲಸದ ಕಡೆಗೆ ತುಂಬಾ ಗಮನಹರಿಸಬೇಕು, ನಿಮ್ಮ ನಿರ್ಲಕ್ಷ್ಯ ವೃತ್ತಿ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಈ ವಾರ ಖರ್ಚು ಇರಲಿದೆ. ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಇರಬಹುದು. ನೀವು ಪರಸ್ಪರ ಮಾತನಾಡಿ ನಿಮ್ಮ ಸಮಸ್ಯೆ ಬಗೆಹರಿಸಲು ಗಮನಿಸಿ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಈ ವಾರ ಅದೃಷ್ಟದ ಬಣ್ಣ ಹಸಿರು, ಅದೃಷ್ಟದ ದಿನ ಗುರುವಾರವಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ವಾರ ನಿಮಗೆ ಶುಭವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ನಿಮ್ಮಿಬ್ಬರ ಬಾಂಧವ್ಯ ಚೆನ್ನಾಗಿರಲಿದೆ. ನಿಮ್ಮ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಚಿಂತೆ ದೂರಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ನೀವು ಈ ವಾರ ನಿಮ್ಮ ಕೋಪ ನಿಯಂತ್ರಿಸಲು ಸಲಹೆ ನೀಡಲಾಗುವುದು. ನೀವು ಆರೋಗ್ಯದ ಬಗ್ಗೆ ಗಮನಹರಿಸಿ. ಅದೃಷ್ಟದ ಬಣ್ಣ ನೇರಳೆಯಾಗುದೆ, ಇನ್ನು ಭಾನುವಾರ ನಿಮಗೆ ಅತ್ಯಂತ ಶುಭವಾಗಿದೆ. ಕರ್ಕ ರಾಶಿ ಕರ್ಕ ರಾಶಿಯವರು ಕುಟುಂಬ ಜೀವನದ ಕಡೆಗೆ ಗಮನಹರಿಸಿ. ನಿಮ್ಮ ಹಾಗೂ ಸಂಗಾತಿಯ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು. ಈ ವಾರ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ಸಾಲ ಮಾಡಿದ್ದರೆ ಆ ಸಾಲ ತೀರಿಸಲು ಸಾಧ್ಯವಾಗುವುದು. ವಿದ್ಯಾರ್ಥಿಗಳು ಓದಿನ ಕಡೆಗೆ ತುಂಬಾನೇ ಗಮನಹರಿಸಬೇಕು. ಅತಿಯಾದ ಮಾನಸಿಕ ಒತ್ತಡ ಇರಲಿದೆ. ಆರೋಗ್ಯಕ್ಕಾಗಿ ಧ್ಯಾನ ಮಾಡಿ. ಈ ವಾರ ನಿಮಗೆ ಕೆನೆ ಬಣ್ಣ ಅದೃಷ್ಟದ ಬಣ್ಣವಾಗಿದೆ, ಈ ವಾರ ಸೋಮವಾರ ಅತ್ಯಂತ ಶುಭ ದಿನವಾಗಿದೆ.
ಕರ್ಕ ರಾಶಿ
ಪ್ರೇಮಿಗಳಿಗೆ ಈ ದಿನ ರೊಮ್ಯಾಂಟಿಕ್ ಆಗಿರಲಿದೆ. ಆರ್ಥಿಕ ಸಮಸ್ಯೆಗಳಿರಬಹುದು, ನೀವು ಈ ದಿನ ಯಾರ ಬಳಿಯೂ ಸಾಲ ಪಡೆಯಬೇಡಿ. ವ್ಯಾಪಾರಿಗಳು ಈ ದಿನ ಆರ್ಥಿಕ ಲಾಭವನ್ನು ಪಡೆಯಲು ಸಾಧ್ಯವಾಗಬಹುದು. ಇನ್ನು ಹೆಚ್ಚಿನ ಲಾಭಕ್ಕಾಗಿ ನಿಮ್ಮ ವ್ಯವಹಾರದಲ್ಲಿ ಕೆಲ ಬದಲಾವಣೆ ಮಾಡಿದರೆ ಇನ್ನೂ ಒಳ್ಳೆಯದು.ಆರೋಗ್ಯದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿರುತ್ತದೆ. ಸಿಂಹ ರಾಶಿ ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಉದ್ಯೋಗಿಗಳು ಕೂಡ ಕಚೇರಿಯಲ್ಲಿ ತಮ್ಮ ವರ್ತನೆ ಬಗ್ಗೆ ಗಮನಹರಿಸಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ವೈವಾಹಿಕ ಜೀವನ ಚೆನ್ನಾಗಿರಲಿದೆ, ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಸಿಂಹ ರಾಶಿ
ಉದ್ಯೋಗಿಗಳು ಈ ವಾರ ಶುಭ, ಅರೆ ಕೆಲಸದಲ್ಲಿ ಒತ್ತಡ ಇರಲಿದೆ. ವ್ಯಾಪಾರಿಗಳು ಧನ ಲಾಭ ಪಡೆಯುತ್ತೀರಿ. ಹಣದ ಖರ್ಚು ಕೂಡ ಹೆಚ್ಚಲಿದೆ, ಆದರೆ ನೀವು ಶಾಪಿಂಗ್‌ಗಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ದೈಹಿಕವಾಗಿ, ಮಾನಸಿಕವಾಗಿ ಈ ವಾರ ಉತ್ತಮವಾಗಿರಲಿದೆ.ಈ ವಾರ ಅದೃಷ್ಟದ ಬಣ್ಣ ನೀಲಿ, ಶುಭ ದಿನ ಬುಧವಾರ ಆಗಿದೆ.
ಕನ್ಯಾ ರಾಶಿ
ಈ ವಾರ ನಿಮಗೆ ಉತ್ತಮವಾಗಿರಲಿದೆ. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ನೀವು ಸಾಲ ಮಾಡಿದ್ದರೆ ನೀವು ಅದನ್ನು ಮರಳಿಸಲು ಪ್ರಯತ್ನಿಸಬೇಕು. ಬೇರೆಯವರ ಕೆಲಸದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಲು ಹೋಗಬೇಡಿ. ವ್ಯಾಪಾರಿಗಳಿಗೆ ಮಿಶ್ರಫಲ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.ಈ ವಾರ ಅದೃಷ್ಟದ ಬಣ್ಣ ಗುಲಾಬಿ, ಅದೃಷ್ಟದ ಬಣ್ಣ ಬುಧವಾರ ಆಗಿದೆ.
ತುಲಾ ರಾಶಿ
ಈ ವಾರ ಆರ್ಥಿಕವಾಗಿ ನಿಮಗೆ ತುಂಬಾ ಮಿಶ್ರಫಲ. ಇನ್ನು ನೀವು ಹೂಡಿಕೆಯಿಂದ ಉತ್ತಮ ಲಾಭ ಪಡೆಯಬಹುದು. ಕೆಲಸದಲ್ಲಿ ನೀವು ನಿರೀಕ್ಷೆ ಪಡೆದಂತೆ ಫಲ ಪಡೆಯುತ್ತೀರಿ. ಹಣದ ಪರಿಸ್ಥಿತಿ ಚೆನ್ನಾಗಿರಲಿದೆ, ಆದರೆ ನಿಮಗೆ ಖರ್ಚು ಅಧಿಕವಿರಲಿದೆ. ಕೆಲವೊಂದು ಅನಗ್ಯತ ಯೋಚನೆಯಿಂದ ದೂರವಿರಿ. ಈ ವಾರ ಅನಗ್ಯತ ಚಿಂತೆಯಿಂದ ವಾರವಿರಿ. ಕುಟುಂಬದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ನಿಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ ಪೀಚ್, ಅದೃಷ್ಟದ ಬಣ್ಣ ಮಂಗಳವಾರವಾಗಿದೆ.
ವೃಶ್ಚಿಕ ರಾಶಿ
ಈ ವಾರದ ಆರಂಭ ನಿಮಗೆ ಉತ್ತಮವಾಗಿರಲಿದೆ. ಉದ್ಯೋಗಸ್ಥರಿಗೆ ಒಳ್ಳೆಯ ಸುದ್ದಿ ಸಿಗಬಹುದು. ನೀವು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಲು ಬಯಸಿದರೆ ಅದಕ್ಕೆ ಉತ್ತಮ ಫಲ ನೀಡಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಹೊಸ ಮನೆ, ವಾಹನ, ಭೂಮಿ ಇತ್ಯಾದಿಗಳನ್ನು ಖರೀದಿಸಬಹುದು. ಕುಟುಂಬ ಜೀವನ ಚೆನ್ನಾಗಿರಲಿದೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಆಗ ನೀವು ಉತ್ತಮ ಪರಿಹಾರವನ್ನು ಪಡೆಯಬಹುದು.
ಅದೃಷ್ಟದ ಬಣ್ಣ ಹಸಿರು, ಅದೃಷ್ಟದ ದಿನ ಸೋಮವಾರವಾಗಿದೆ.
ಧನು ರಾಶಿ
ಈ ದಿನ ಮನೆಯ ವಾತಾವರಣ ಅಷ್ಟೊಂದು ಚೆನ್ನಾಗಿರಲ್ಲ.ಹಣದ ವಿಷಯದಲ್ಲಿ ಈ ವಾರ ಅಷ್ಟೊಂದು ಅನುಕೂಲಕರವಲ್ಲ. ಶೀಘ್ರದಲ್ಲೇ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಅಪೂರ್ಣವಾಗಿ ಬಿಟ್ಟ ಕೆಲಸದಿಂದಾಗಿ ಸಮಸ್ಯೆಯಾಗಲಿದೆ. ವ್ಯಾಪಾರಸ್ಥರಿಗೆ ಈ ವಾರ ಸಾಮಾನ್ಯವಾಗಿರುತ್ತದೆ. ನೀವು ಉತ್ತಮ ಲಾಭವನ್ನು ನಿರೀಕ್ಷಿಸುತ್ತಿದ್ದರೆ ತುಂಬಾ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬಹುದು. ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.
ಕೆನೆ ಬಣ್ಣವು ಅದೃಷ್ಟದ ಬಣ್ಣ ಆಗಿದೆ, ಅದೃಷ್ಟದ ದಿನ ಶುಕ್ರವಾರವಾಗಿದೆ.
ಮಕರ ರಾಶಿ
ಈ ವಾರ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ. ವ್ಯಾಪಾರಿಗಳಿಗೆ ಈ ವಾರ ತುಂಬಾ ಲಾಭದಾಯಕವಾಗಿರಲಿದೆ. ಉದ್ಯೋಗಿಗಳು ವರ್ಗಾವಣೆಗೆ ಯತ್ನಿಸುತ್ತಿದ್ದರೆ ಈ ವಾರ ಫಲ ಸಿಗಲಿದೆ. ಈ ವಾರ ಕೆಲಸದ ಕಡೆಗೆ ಗಮನಹರಿಸಿ. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಈ ಏಳು ದಿನಗಳು ನಿಮಗೆ ಹಣದ ವಿಷಯದಲ್ಲಿ ಬಹಳ ಮುಖ್ಯವಾಗಿರಲಿದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ ಕಂದು, ಅದೃಷ್ಟದ ದಿನ ಮಂಗಳವಾರವಾಗಿದೆ.
ಕುಂಭ ರಾಶಿ
ಈ ರಾಶಿಯ ವಿದ್ಯಾರ್ಥಿಗಳಿಗೆ ಈ ವಾರವು ತುಂಬಾ ಚೆನ್ನಾಗಿರಲಿದೆ. ಈ ವಾರ ನಿಮ್ಮ ಆದಾಯವೂ ಹೆಚ್ಚಾಗುವ ಸಾಧ್ಯತೆಯಿದೆ. ಈ ವಾರ ಮಕ್ಕಳ ಕಡೆಯಿಂದ ನಿಮಗೆ ಸಂತೋಷದ ಸುದ್ದಿ ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ಈ ಸಮಯದಲ್ಲಿ ನೀವು ಹೂಡಿಕೆ ಮಾಡಲು ಉತ್ತಮ ಅವಕಾಶ ಸಿಗಲಿದೆ, ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ ಕೆಂಪು, ಅದೃಷ್ಟದ ಬಣ್ಣ ಭಾನುವಾರವಾಗಿದೆ.
ಮೀನ ರಾಶಿ
ಈ ವಾರ ನೀವು ಸ್ವಲ್ಪ ಜಾಗ್ರತೆವಹಿಸಬೇಕು. ವಾರದ ಮಧ್ಯದಲ್ಲಿ ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಈ ವಾರ ಉತ್ತಮವಾಗಿರಲಿದೆ. ಈ ವಾರ ನಿಮಗೆ ಹಣದ ವಿಷಯದಲ್ಲಿ ಮಿಶ್ರ ಫಲಿತಾಂಶ. ಹಣದ ಖರ್ಚು ಇರಲಿದೆ. ಈ ವಾರ ನೀವು ಕುಟುಂಬ ಜೀವನದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ ಕೇಸರಿ, ಅದೃಷ್ಟದ ದಿನ ಗುರುವಾರ ಆಗಿದೆ