ಕಾರ್ಕಳ ನ.11: ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಭಾರತಿ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಶಾಲಾ ಶಿಕ್ಷಣ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಕಾರ್ಕಳದ ಬಿ. ಆರ್. ಸಿ ಅಲ್ಲಿ ನಡೆಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ಗುರುಪ್ರಸಾದ್ ಅವರು ನೆರವೇರಿಸಿದರು. ಕಾರ್ಕಳ ಟೈಗರ್ಸ್ ನ ಸೇವಾ ಮನೋಭಾವವನ್ನು ಶ್ರೀಮತಿ ರಮಿತಾ ಶೈಲೇಂದ್ರ ಅವರು ಸಾರ್ವಜನಿಕರಿಗೆ ತಿಳಿಸುವಲ್ಲಿ ಯಶಸ್ವಿಯಾದರು, ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಣ ಇಲಾಖೆಯ ಸಂತೋಷ್ ಅವರು ನೆರವೇರಿಸಿದರು. ವೇದಿಕೆಯಲ್ಲಿ ಕಾರ್ಕಳ ಟೈಗರ್ಸ್ ನ ಸದಸ್ಯರಾಗಿರುವ ಪ್ರದೀಪ್ ಶೃಂಗಾರ ಮತ್ತು ಶ್ರೀನಾಥ್ ಆಚಾರ್ಯ ಅವರು ಉಪಸ್ಥಿತರಿದ್ದರು. ಅದೇ ರೀತಿ ತಂಡದ ಸದಸ್ಯರಾಗಿರುವ ಪ್ರವೀಣ್ ಕುಲಾಲ್ ಮತ್ತು ಅರುಣ್ ಅವರು ಜೊತೆ ಆದರು. ಕಾರ್ಯಕ್ರಮದ ಸದುಪಯೋಗವನ್ನು ಸಾರ್ವಜನಿಕರು ಮತ್ತು ಹತ್ತನೇ ತರಗತಿಗೆ ಪರೀಕ್ಷೆ ಬರೆಯುವಂತಹ ಬಹಳಷ್ಟು ಮಕ್ಕಳು ಸಹುಪಯೋಗವನ್ನು ಪಡೆದುಕೊಂಡರು.