spot_img

ಗುರುಕುಲ ಶಾಲೆಯಲ್ಲಿ ಕೃಷ್ಣವೇಷ ಸ್ಪರ್ಧೆ :

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ನಡೆಯಿತು.

ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಗೊಂಡ ಸ್ಪರ್ಧೆಯಲ್ಲಿ
0 – 2 / 2 – 5 /5 – 10 / ವರ್ಷದೊಳಗಿನ ಮಾಳ ಗ್ರಾಮದ ವ್ಯಾಪ್ತಿಯ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತೀರ್ಪುಗಾರರಾಗಿ ಶ್ರೀ ಶ್ರೀರಂಗ ಜೋಶಿ, ಡಾ| ಸತ್ಯನಾರಾಯಣ ಭಟ್, ಶ್ರೀಮತಿ ರಮಿತಾ ಶೈಲೇಂದ್ರ ರಾವ್ ಕಾರ್ಕಳ. ಇವರು ಆಗಮಿಸಿದ್ದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಶ್ರೀ ಗಜಾನನ ಮರಾಠೆ, ಮುಖ್ಯ ಅತಿಥಿಗಳಾಗಿ ಕಾರ್ಕಳದ ನಿವೃತ್ತ ಏರ್ ವೈಸ್ ಮಾರ್ಷಲ್ ಶ್ರೀ ರಮೇಶ್ ಕಾರ್ಣಿಕ್ , ಸಂಚಾಲಕರಾದ ಶ್ರೀ ಸುಧಾಕರ್ ಡೋಂಗ್ರೆ, ಹಾಗೂ ತೀರ್ಪುಗಾರರು ವೇದಿಕೆಯಲ್ಲಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ರಮೇಶ್ ಕಾರ್ಣಿಕ್ ರವರು ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ , ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಸಂಘಟಿಸಿ ಮಕ್ಕಳನ್ನು ಹುರಿದುಂಬಿಸಬೇಕು. ಉತ್ತಮ ಕಾರ್ಯಕ್ರಮ. ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ತದನಂತರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
0 – 2 ವರ್ಷದೊಳಗಿನ ಮಕ್ಕಳು.
ಪ್ರಥಮ :- ರಿಯಾನ್ಶಿ ಸುಕೇಶ್ ಶೆಟ್ಟಿ
ದ್ವಿತೀಯ :- ಕೃತಿಕ್ ಆಚಾರ್ಯ
ತೃತೀಯ :- ಆವ್ಯುಕ್ತ್ ಹೆಗ್ಡೆ

2 – 5 ವರ್ಷದೊಳಗಿನ ಮಕ್ಕಳು.
ಪ್ರಥಮ :- ಕೃಷಾ
ದ್ವಿತೀಯ :- ಅಂಶುಲ್
ತೃತೀಯ :- ಸ್ಮ್ರತಿ ಎಸ್ ಸಾಲಿಯಾನ್

5 – 10 ವರ್ಷದೊಳಗಿನ ಮಕ್ಕಳು.
ಪ್ರಥಮ :- ಅಪೇಕ್ಷಾ ಕಾಮತ್
ದ್ವಿತೀಯ :- ಸಂಹಿತಾ ಮರಾಠೆ
ತೃತೀಯ :- ನವತೇಜ್

ಭಾಗವಹಿಸಿದ ಎಲ್ಲಾ ಮುದ್ದುಕೃಷ್ಣರಿಗೂ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಉಸ್ತುವಾರಿಯನ್ನು ಸಹ ಶಿಕ್ಷಕಿ ಶ್ರೀಮತಿ ರಕ್ಷಿತಾ ರವರು ನಿರ್ವಹಿಸಿ , ಎಲ್ಲಾ ಶಿಕ್ಷಕರು , ಪೋಷಕರು , ಆಡಳಿತ ಮಂಡಳಿಯ ಸದಸ್ಯರು , ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪೂರ್ಣಿಮಾ ಶೆಣೈ ವಂದನಾರ್ಪಣೆಗೈದರು.

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು