ಕಾರ್ಕಳ : ಅಂತರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಸೇವಾ ಸಂಸ್ಥೆ ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಉಡುಪಿ ಶಿವಮೊಗ್ಗ ಭದ್ರಾವತಿ ಸೊರಬ ಹಾಗೂ ಇತರ ಜಿಲ್ಲೆಯನ್ನು ಒಳಗೊಂಡ ಲಯನ್ಸ್ ಜಿಲ್ಲೆ 317c ಸಂಪುಟ ಕಾರ್ಯದರ್ಶಿಯಾಗಿ ಲಯನ್ ಗಿರೀಶ್ ರಾವ್ ರವರನ್ನ ಆಯ್ಕೆಯಾಗಿರುತ್ತಾರೆ
ಜೆಸಿಐ ಭಾರತದ ಮೂರು ರಾಷ್ಟ್ರೀಯ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದ ಹೆಮ್ಮೆ ಶ್ರೀ ಗಿರೀಶ್ ರವರದು
ಸ್ನಾತಕೋತರ ಪದವಿ ದಾರಾರಾದ ಶ್ರೀ ಗಿರೀಶ್ ಯವರು ಕಾರ್ಕಳ ಶ್ರೀ ಕ್ಷೇತ್ರ ಹಿರಿ ಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೆ ಸರರಾಗಿ. ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಸಕ್ರಿಯ ಸದಸ್ಯ. ಉಡುಪಿ ಜಿಲ್ಲಾ ಅಮೆಚೂರ್ ಸ್ಪೋರ್ಟ್ಸ್ ಕ್ಲಬ್ನ ಸದಸ್ಯ. ಕಾರ್ಕಳ ಸಾಹಿತ್ಯ ಸಂಘದ ಸಂಘಟನಾ ಕಾರ್ಯದರ್ಶಿ. ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ. ಸೇವೆ ಸಲ್ಲಿಸುತ್ತಿದ್ದಾರೆ
ಹಾಗೂ ಮೆಸ್ಕಾಂ ನೌಕರರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿಯಾಗಿ. ಕೆಪಿಟಿಸಿಎಲ್ ಸಹಕಾರಿ ಸಂಘದ ಮಾಜಿ ನಿರ್ದೇಶಕರಾಗಿ . ಜೆಸಿಐ ಕಾರ್ಕಳ ಸೆಂಟ್ರಲ್ ಇದರ ಮಾಜಿ ಅಧ್ಯಕ್ಷರಾಗಿ. ವಲಯ 15ರ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ
ಲಯನ್ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ವಲಯ ಉಪಾಧ್ಯಕ್ಷರಾಗಿ ಹಾಗೂ ಪ್ರಾಂತೀಯ ಕಾರ್ಯದರ್ಶಿಯಾಗಿ ಹಾಗೂ ಜಿಲ್ಲಾ ಸಂಪುಟ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
ಛತ್ರಪತಿ ಫೌಂಡೇಶನ್ ಸಂಸ್ಥೆಯ ಸ್ಥಾಪಕರಾಗಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದು ಇದಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2023 ರಲ್ಲಿ ಲಭಿಸಿರುತ್ತದೆ.
ಇವರ ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಕಾರ್ಯದರ್ಶಿಯ ಜವಾಬ್ದಾರಿಯನ್ನು ನೀಡಿ ಇವರನ್ನ ಆಯ್ಕೆ ಮಾಡಿರುತ್ತದೆ