ದೆಹಲಿ : ಪ್ರಾಧಾನಮಂತ್ರಿ ನರೇಂದ್ರ ಮೋದಿ (PM Narendra MOdi) ಅವರು ಮಂಗಳವಾರ (Tuesday) ಬೆಳಗ್ಗೆ 11:40 ಕ್ಕೆ ವಾರಣಾಸಿಯಲ್ಲಿ (Varanasi) ತಮ್ಮ ನಾಮಪತ್ರವನ್ನು (Nomination) ಸಲ್ಲಿಸಲಿದ್ದಾರೆ, ಇದು ಹಿಂದೂ ಪಂಚಾಂಗದ ಪ್ರಕಾರ ‘ಅಭಿಜಿತ್ ಮಹೂರ್ತ’ ಮತ್ತು ‘ಆನಂದ ಯೋಗ’ (Anand Yoga) ದ ಅಡಿಯಲ್ಲಿ ಬರುವ ಅತ್ಯಂತ ಮಂಗಳಕರ ಸಮಯವಾಗಿದ್ದು, ಈ ಅದ್ಭುತ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಲಿದ್ದು, ತಮ್ಮ ನಾಮಪತ್ರ ಸಲ್ಲಿಸುವ ಮುನ್ನ ಕಾಲ ಭೈರವ ದೇವಾಲಯಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ.
ಅಪರೂಪದ ಸಂಯೋಗ
ಈ ದಿನ ನಾಮಪತ್ರ ಸಲ್ಲಿಸುವಾಗ ಬಹಳ ವಿಶೇಷವಾದ ಕಾಕತಾಳಿಯಗಳು ಸಂಭವಿಸಲಿದ್ದು,, ಈ ಆನಂದ ಯೋಗದ ಜೊತೆಗೆ ಗಂಗಾ ಸಪ್ತಮಿ ಸಹ ಬಂದಿದೆ. ಹಿಂದೂ ಪಂಚಾಂಗದ ಪ್ರಕಾರ, ನಾಮಪತ್ರ ಸಲ್ಲಿಕೆ ಸಮಯದಲ್ಲಿ ‘ಅಭಿಜೀತ್ ಮುಹೂರ್ತ’, ‘ಆನಂದ ಯೋಗ’ ಮತ್ತು ‘ಪುಷ್ಯ ನಕ್ಷತ್ರ’ಗಳ ಸಂಯೋಗವಾಗುತ್ತಿದೆ. ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಪುಂಜಗಳ ಚಕ್ರವರ್ತಿ ಎಂದು ಪರಿಗಣಿಸಲಾಗುತ್ತದೆ. 27 ನಕ್ಷತ್ರಪುಂಜಗಳಲ್ಲಿ, ಹಿಂದೂ ವೈದಿಕ ಜ್ಯೋತಿಷ್ಯ ಗ್ರಂಥಗಳಲ್ಲಿ ಅತ್ಯುತ್ತಮ ನಕ್ಷತ್ರಪುಂಜದ ಸ್ಥಾನಮಾನವನ್ನು ಇದಕ್ಕೆ ನೀಡಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ನಕ್ಷತ್ರ ಇರುವ ದಿನದಲ್ಲಿ ಮಾಡಿದ ಎಲ್ಲಾ ಕೆಲಸವು ವಿಶೇಷ ರೀತಿಯಾಗಿ ಯಶಸ್ಸನ್ನು ನೀಡುತ್ತದೆ ಎನ್ನುವ ನಂಬಿಕೆ ಇದೆ.
ಪಂಡಿತರ ಪ್ರಕಾರ ಈ ಸಮಯವನ್ನ ಬಹಳ ಅಪರೂಪ ಎನ್ನಲಾಗುತ್ತದೆ. ಶುಭ ಸಮಯವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರವು ಮಂಗಳವಾರ ಮಧ್ಯಾಹ್ನ 1:43 ರಿಂದ ಪ್ರಾರಂಭವಾಗುತ್ತದೆ ಮತ್ತು 3:10 ರವರೆಗೆ ಮುಂದುವರಿಯುತ್ತದೆ. ಇದಾದ ನಂತರ ಆಶ್ಲೇಷಾ ನಕ್ಷತ್ರ ಆರಂಭವಾಗಲಿದೆ. ಇದರ ಜೊತೆಗೆ ಗಂಗಾ ಸಪ್ತಮಿ ಇರುವ ಕಾರಣ ಹಾಗೂ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವ ಕಾರಣ ಇದೊಂದು ರೀತಿಯಲ್ಲಿ ಅಪರೂಪದಲ್ಲಿ ಅಪರೂಪದ ಸಂಯೋಗ ಎಂದರೆ ತಪ್ಪಾಗಲಾರದು.
ಆನಂದ ಯೋಗ ಎಂದರೇನು?
ಜ್ಯೋತಿಷ್ಯದ ಪ್ರಕಾರ, 12 ರಾಶಿಗಳು ಮತ್ತು 27 ಯೋಗಗಳು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ವಿಷ್ಕುಂಭದಿಂದ ವೈಧೃತಿಯವರೆಗಿನ 27 ಯೋಗಗಳು ನಮ್ಮ ಪ್ರತಿಯೊಂದು ಕೆಲಸವನ್ನು ಸಹ ಪರಿಣಾಮ ಬೀರುತ್ತವೆ. ಈ ಎಲ್ಲಾ ಯೋಗಗಳಲ್ಲಿ, ಶುಭ ಮತ್ತು ಅಶುಭ ಪರಿಣಾಮಗಳನ್ನ ಬೀರುತ್ತದೆ. ಅದರಂತೆ ಇಂದು ಆನಂದ ಯೋಗ ರೂಪುಗೊಳ್ಳುತ್ತಿದ್ದು, ಈ ದಿನ ಮಾಡುವ ಕೆಲಸಗಳಲ್ಲಿ ಎಂದಿಗೂ ಸೋಲಾಗುವುದಿಲ್ಲ ಎನ್ನುವ ನಂಬಿಕೆ ಇದೆ. ಅಲ್ಲದೇ, ಈ ಯೋಗ ಎಲ್ಲಾ ರೀತಿಯಲ್ಲೂ ಅದೃಷ್ಟವನ್ನ ತರುತ್ತದೆ.
ಯಾವುದೇ ಹೊಸ ಕೆಲಸ ಅಥವಾ ಹೊಸ ಉದ್ಯೋಗವನ್ನು ಪ್ರಾರಂಭಿಸಲು ಈ ಯೋಗವು ಅತ್ಯುತ್ತಮವಾಗಿದೆ ಎನ್ನಲಾಗುತ್ತದೆ. ಈ ಯೋಗದಲ್ಲಿ ಮಾಡುವ ಕೆಲಸದಲ್ಲಿ ಯಾವುದೇ ಅಡ್ಡಿಯಾಗಲೀ, ಜಗಳವಾಗಲಿ ಅಥವಅ ಕಷ್ಟಗಳಾಗಲಿ ಇರುವುದಿಲ್ಲ. ಇದರ ಜೊತೆಗೆ ಈ ಯೋಗದಲ್ಲಿ ಜನಿಸಿದ ವ್ಯಕ್ತಿಯು ಎಂದಿಗೂ ರೋಗಗಳು ಇತ್ಯಾದಿಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುವುದಿಲ್ಲ ಎನ್ನುವ ನಂಬಿಕೆ ಕೂಡ ಇದೆ.
ಇನ್ನು ಈ ದಿನ ಸಂಜೆ, ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ, ಇದು ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತದೆ. ಪ್ರಧಾನಿ ತಮ್ಮ ರೋಡ್ ಶೋ ಕೊನೆಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.