spot_img

ಯುಗಾದಿ ವಿಶು ಪರ್ವಕಾಲದಲ್ಲಿ ಮಾತೃಶ್ರೀ ಶ್ರೀಮತಿ ಹೇಮಾವತಿ ಅಮ್ಮನವರಿಂದ ಸ್ಫೂರ್ತಿ ವೆಬ್ ನ್ಯೂಸ್ ಬಿಡುಗಡೆ :

ಮಾಧ್ಯಮ ಬದುಕನ್ನು ಕಟ್ಟುವಂತಿರಬೇಕು. ನೊಂದವರ ಎದೆಯುಸಿರು ನಮ್ಮ ಬರವಣಿಗೆಯಲ್ಲಿ ಅರಳಬೇಕು. ಸಿಹಿ ಇರಲಿ, ಕಹಿ ಇರಲಿ ನೆನಪುಗಳನ್ನು ಅನುಭವದ ಪ್ರಬುದ್ಧ ಮೂಸೆಯಲ್ಲಿಟ್ಟು ತೂಗಿ ನೋಡಬೇಕು. ನಮ್ಮ ಸುಖ, ದುಃಖ, ಕನಸು ಕನವರಿಕೆಗಳು ಕೇವಲ ನಮ್ಮದಾಗಿ ಉಳಿಯಬಾರದು. ಇಡೀ ಸಮಾಜ ಅನುಭವಿಸುವ ಅಂತದೇ ಭಾವನೆಗಳ ಜತೆ ಅವು ಸಂವಾದ ನಡೆಸಬೇಕು. ಏಕೆಂದರೆ ನಾನೊಬ್ಬ ಸಾಮಾಜಿಕ ಮನುಷ್ಯಳು. ನನ್ನ ಕಷ್ಟ ಮತ್ತು ಸುಖದ ಬೇರುಗಳು ಸಮಾಜ ಎಂಬ ಮಣ್ಣಿನಲ್ಲಿ ಬಲವಾಗಿ ಬೇರೂರಿದೆ. ಬರವಣಿಗೆ ಸೇರಿದಂತೆ ಮನುಷ್ಯನ ಎಲ್ಲಾ ಪ್ರತಿಕ್ರಿಯೆಗಳು ಜೀವಪರವಾಗಿ ಇರಬೇಕು. ಈಶವ್ಯಾಸಂಮಿದಂ ಸರ್ವಂ… ಎಂಬ ಉಪನಿಷತ್ತಿನ ಮಾತು ನನ್ನ ಪಾಲಿಗೆ ಶ್ರೇಷ್ಠವಾದುದು. ಭಗವಂತ ಇದ್ದಾನೆ ಎಂಬ ಭಾವನೆ ಈ ಜಗತ್ತಿನ ಎಲ್ಲಾ ಜೀವಿಗಳಲ್ಲಿಯೂ ಉದಾತ್ತವಾದದು. ಅದು ಸಮಭಾವ. ಅಂತಹ ಸಮಾನತೆ ಭಾವನೆ ಇಂದಿನ ಅಗತ್ಯವಾಗಿದೆ. ನಮ್ಮ ಸಮಾಜದಲ್ಲಿ ಪ್ರೀತಿ ಮತ್ತು ಕಾರುಣ್ಯದ ರಸ ಇದೆ ಎಂದು ಸೃಜನಶೀಲ ಮಾಧ್ಯಮ “ಸ್ಪೂರ್ತಿ ನ್ಯೂಸ್” ಮೂಲಕ ಬರವಣಿಗೆಯತ್ತ ಮುಖ ಮಾಡಿದ್ದೇನೆ. ಅಂತಹ ಬರವಣಿಗೆಯ ಪಸೆ ಇದೆ ಎಂಬ ವಿಶ್ವಾಸವಿದೆ. ಅಂತಹ ಸೃಜನಶೀಲತೆ ಒರತೆಯ ಮೂಲವನ್ನು ಇನ್ನಷ್ಟು ಸರಾಗಗೊಳಿಸಿದರೆ ಇನ್ನಷ್ಟು ಬರವಣಿಗೆ ಸಾಧ್ಯವಾಗಬಹುದು.

ಧರಣಿಯು ಭೂಮಿ ಬದುಕಿಗೆ ರೂಪವಾದರೆ ಮುಂದೆ ಅಮ್ಮನಿಗೆ ಸಂಕೇತವಾಗುತ್ತದೆ. ಧರಣಿಯಷ್ಟೇ ಸಮಾನಳು ಅಮ್ಮ ಮಾತ್ರಶ್ರೀ ಹೇಮಾವತಿ ಅಮ್ಮನವರಿಂದ ಜನಧ್ವನಿಯ ಸ್ಪರುಣೆ “ಸ್ಪೂರ್ತಿ ನ್ಯೂಸ್”ನ್ನು ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ, ಇದೇ ಸೌರಮಾನ ಯುಗಾದಿಯ ಪರ್ವ ಕಾಲದಲ್ಲಿ
ಲೋಕಾರ್ಪಣೆ ಮಾಡುತ್ತಿದ್ದೇವೆ ತಿದ್ದಿ ತೀಡಿ ಬೆಳೆಸಿ ಆಶೀರ್ವದಿಸಿ.
ವಂದನೆಗಳು.

ಸಂಪಾದಕರು
ಶ್ರೀಮತಿ ರಮಿತಾ ಶೈಲೆಂದ್ರ
ಕಾರ್ಕಳ.

Whats app

https://chat.whatsapp.com/HpDrdGiiGkKINVEhnByXy4

Face Book

https://www.facebook.com/profile.php?id=61557699700103&mibextid=LQQJ4d

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು