ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ವೆಹಿಕ್ಯೂಲರ್ ಓವರ್‌ಪಾಸ್ ಕಾಮಗಾರಿ
ಪ್ರಗತಿಯಲ್ಲಿದ್ದು, ಒಂದು ಬದಿಯ ರಸ್ತೆ ಡಾಮರು ಕಾಮಗಾರಿ ಪೂರ್ಣಗೊಂಡು ಎ. 17ರಂದು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರಾ. ಹೆ. ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಜನರ ಬಹುಕಾಲದ ಬೇಡಿಕೆಯಂತೆ 27.4 ಕೋ. ರೂ. ವೆಚ್ಚದಲ್ಲಿ 1 ಕಿ. ಮೀ. ಅಂತರದಲ್ಲಿ ಓವರ್‌ಪಾಸ್ ನಿರ್ಮಾಣ ವಾಗುತ್ತಿದೆ. 2023ರ ಜನವರಿಯಲ್ಲಿ ಆರಂಭಗೊಂಡಿದ್ದ ಕಾಮಗಾರಿಗೆ ತಾಂತ್ರಿಕ ಕಾರಣಕ್ಕೆ ವಿಳಂಬವಾಗಿತ್ತು. ಒಂದೆಡೆ ಮಳೆ, ಇನ್ನೊಂದೆಡೆ ಕಲ್ಲು ಬಂಡೆ ಮೊದಲಾದ ಕಾರಣದಿಂದ ಕಾಮಗಾರಿಗೆ ತೊಡಕುಂಟಾಗಿತ್ತು. ಮಳೆ ಅನಂತರ ವೇಗ ಪಡೆದ ಕಾಮಗಾರಿ ಇದೀಗ ಒಂದು ಬದಿಯಲ್ಲಿ 60 ಮೀ. ಅಗಲದ ರಸ್ತೆ ಪೂರ್ಣಗೊಳಿಸಲಾಗಿದೆ.