spot_img

ಯಕ್ಷಗಾನ ನಿಲ್ಲಿಸಲು ಹೋದ ಅಧಿಕಾರಿಗಳೇ.?! ಯಾರಿಗಾಗಿ ಈ ಓಲೈಕೆ : ಶ್ರೀಮತಿ ರಮಿತಾ ಶೈಲೇಂದ್ರ ಸಮಾಜ ಸೇವಕರು ಕಾರ್ಕಳ

ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುಂಡ್ಲಿ ಎಂಬಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಮಧ್ಯಪ್ರವೇಶಿಸಿ ತಡೆಯಲು ಪ್ರಯತ್ನಿಸಿದಾಗ ಯಕ್ಷಾಭಿಮಾನಿಗಳು ತಡೆದರು ಇದರಿಂದ ಪೊಲೀಸರು ಹಿಂದೆ ಹೋದರು.
ಕರಾವಳಿ ಭಾಗದಲ್ಲಿ ಗಂಡು ಕಲೆ ಎಂದು ಪ್ರಸಿದ್ಧಿಗೊಂಡಿರುವ ಯಕ್ಷಗಾನಕ್ಕೆ ಈ ರೀತಿ ಅವಮಾನ ಆದರೆ ಮುಂದಿನ ಸ್ಥಿತಿಗತಿಗಳನ್ನು ಎಣಿಸುವಾಗ ಚಿಂತಾ ಜನಕವಾಗಿ ಕಾಣುತ್ತಿದೆ.
ಅಧಿಕಾರಿಗಳ ಈ ವರ್ತನೆ ಯಾರನ್ನು ಓಲೈಕೆ ಮಾಡಲಿಕ್ಕಾಗಿ.?? ನಿಮಗೆ ತುಳುನಾಡುವಿನ ಸಂಸ್ಕೃತಿ,ಕಲೆಗಳ ಬಗ್ಗೆ ಗೌರವ ಇಲ್ಲದಿದ್ದರೆ ವರ್ಗಾವಣೆ ತೆಗೆದುಕೊಂಡು ಹೋಗಿ, ಅದನ್ನು ಬಿಟ್ಟು ಇಲ್ಲಿ ನಡೆಯುವ ಕಲೆಗಳಿಗೆ ಅದನ್ನು ಪೂಜಿಸುವ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸಗಳನ್ನು ಮಾಡಬೇಡಿ. ಓಲೈಕೆಯ ಅಧಿಕಾರ ಹೆಚ್ಚು ದಿನ ಶಾಶ್ವತವಾಗಿ ಉಳಿಯುವುದಿಲ್ಲ, ನಮ್ಮ ತುಳುನಾಡಿನ ಕಲೆಗಳಿಗೆ ತುಳುನಾಡಿನಲ್ಲಿ ಯಾವುದೇ ಅನುಮತಿಗಳ ಅಗತ್ಯವಿಲ್ಲ ಯಾಕೆಂದರೆ ನಾವು ಬೆಳೆದಿರುವುದು ಅದರ ಮದ್ಯದಲ್ಲಿ ಅದು ನಮ್ಮ ಉಸಿರು, ಅದು ನಮ್ಮ ಜೀವನಾಡಿ. ಈ ಯಕ್ಷಗಾನ ಕಲಾವಿದರಿಗೆ ಮತ್ತು ಅಭಿಮಾನಿಗಳಿಗೆ ಅವಮಾನ ಮಾಡಿದ್ದೀರಿ ನಿಮ್ಮಂತಹ ಸವಿಂದಾನವನ್ನು ಕಲಿತವರು ಹೀಗೆ ಮಾಡಿದಲ್ಲಿ ಸಮಾಜಕ್ಕೆ ಕಾನೂನಿನ ಪಾಠ ಯಾರು ಮಾಡುವುದು. ಇದು ಹೀಗೆ ಮುಂದುವರೆದಲ್ಲಿ ನಿಮ್ಮ ಠಾಣೆ ಎದುರಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು