ಕಾರ್ಕಳದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ಮೂಲಕ ಜನ ಮಾನಸದಲ್ಲಿ ವಿಶಿಷ್ಟ ಚಾಪನ್ನು ಕಾರ್ಕಳ ಟೈಗರ್ಸ್ ಮೂಡಿಸಿದೆ.
ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಈ ಸಂಘಟನೆ ಮಾಡಿದೆ.
ಈಗ ಮತ್ತೊಂದು ಕಾರ್ಯಕ್ರಮಕ್ಕೆ ಈ ಸಂಘಟನೆ ಸಜ್ಜಾಗಿದೆ.
ಕಾರ್ಕಳ ಟೈಗರ್ಸ್ ವತಿಯಿಂದ ದಿನಾಂಕ 19/10/2024 ರಂದು ಸಾಯಂಕಾಲ 6.30 ಗಂಟೆಗೆ ಸಾವಿರಾರು ಜನರ ಮೆಚ್ಚುಗೆ ಪಡೆದ ವಿಜಯ್ ಕುಮಾರ್ ಕೊಡಿಯಾಲಬೈಲ್ ನಿರ್ದೇಶನದ ಶಿವದೂತೆ ಗುಳಿಗೆ ನಾಟಕ ನಡೆಯಲಿದೆ.
ಈ ಕಾರ್ಯಕ್ರಮ ದಲ್ಲಿ ಪ್ರಮುಖವಾಗಿ ಭಾರತ ದೇಶದ ಕೋಟಿ ಜನರ ಹೃದಯವಂತ ಪದ್ಮ ವಿಭೂಷಣ ರತನ್ ನಾವೆಲ್ ಟಾಟಾ ರವರಿಗೆ ಶ್ರದಾಂಜಲಿ ಪುಷ್ಪಾರ್ಚನೆ ಮಾಡಿ. ನಂತರ ಪ್ರದರ್ಶನ ಶಿವದೂತೆ ಗುಳಿಗೆ ನಾಟಕ ನಡೆಯಲಿದೆ.
ನಾಟಕವನ್ನು ಎಲ್ಲರೂ ಕೂಡ ಉಚಿತವಾಗಿ ವೀಕ್ಷಣೆ ಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಇಂದು ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಇಂದ್ರಪ್ರಸ್ಥ ಗುರುದೀಪ್ ಗಾರ್ಡನ್ ಸಾಲ್ಮರದಲ್ಲಿ ನಡೆಯುವ ನಾಟಕದಲ್ಲಿ ಎಲ್ಲರೂ ಪಾಲ್ಗೊಳುವಂತೆ ಮನವಿ ಮಾಡಿದ್ದಾರೆ.