spot_img

ಇಂದಿನ ಭವಿಷ್ಯ :

ಮೇಷ

ಕೈ ಹಿಡಿದ ಕೆಲಸದ ಬಗ್ಗೆ ಯಶಸ್ಸು ಗಳಿಸುವವರೆಗೂ ಯಾರಿಗೂ ತಿಳಿಸುವುದಿಲ್ಲ. ಮನೆಯ ದುರಸ್ತಿಗಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ಸಾಮಾಜಿಕ ಸಮಾರಂಭಗಳಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸುವಿರಿ. ಒಳ್ಳೆಯ ಅಭ್ಯಾಸ ಬೆಳೆಸಿಕೊಂಡು ಎಲ್ಲರಿಗೂ ಮಾದರಿಯಾಗುವಿರಿ. ಉದ್ಯೋಗದ ಸಲುವಾಗಿ ಕುಟುಂಬದಿಂದ ದೂರ ಉಳಿಯುವಿರಿ. ಮನನ ದುಗುಡದಿಂದ ಹೊರ ಬರಲು ಆಧ್ಯಾತ್ಮಿಕತೆಯನ್ನು ಅವಲಂಬಿಸುವಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬೂದು ಬಣ್ಣ

ವೃಷಭ

ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ. ಚಿನ್ನ ಮತ್ತು ಬೆಳ್ಳಿಯ ಆಭರಣಕ್ಕೆ ಹಣ ವ್ಯಯವಾಗುತ್ತದೆ. ಹೊಗಳಿಕೆಗೆ ಮರುಳಾಗಿ ಸಂಬಂಧಿಕರೊಬ್ಬರಿಗೆ ಧನ ಸಹಾಯ ಮಾಡುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟದ ಬದಲಾವಣೆಗಳು ಕಂಡು ಬರಲಿವೆ. ವಿದ್ಯಾರ್ಥಿಗಳು ಉನ್ನತ ಅಧ್ಯಯನದಲ್ಲಿ ಮೇಲ್ಮಟ್ಟ ತಲುಪುತ್ತಾರೆ. ಆತ್ಮೀಯರೊಬ್ಬರ ಭೇಟಿಯಿಂದ ಸಂತಸಗೊಳ್ಳುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ.

ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 11

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಕಂದು ಬಣ್ಣ

ಮಿಥುನ

ಸ್ಟಾಕ್ ಮತ್ತು ಷೇರುಗಳ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಕುಟುಂಬದ ಸದಸ್ಯರ ಸಹಾಯ ಸಹಕಾರ ದೊರೆಯುತ್ತದೆ. ಸ್ನೇಹಿತರ ಜೊತೆ ಪಾಲುದಾರಿಕೆಯ ವ್ಯಾಪಾರ ಆರಂಭಿಸುವಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ.

ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕಪ್ಪು

ಕಟಕ

ಒತ್ತಡಕ್ಕೆ ಒಳಗಾಗದೆ ಸರಳ ಜೀವನ ನಡೆಸುವಿರಿ. ಉದ್ಯಮಿಗಳಾದಲ್ಲಿ ಉತ್ತಮ ವರಮಾನ ದೊರೆಯಲಿದೆ. ಆತ್ಮೀಯರಿಗೆ ಹಣದ ಸಹಾಯ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗಲಿದೆ. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಿರಿ. ದೂರವಾಗಿದ್ದ ಸಂಬಂಧಿಕರೊಬ್ಬರು ಮರಳಿ ನಿಮ್ಮ ಪ್ರೀತಿ ವಿಶ್ವಾಸ ಬಯಸುತ್ತಾರೆ. ಪಾಲುಗಾರಿಕೆ ವ್ಯಾಪಾರದಲ್ಲಿ ಹಣವನ್ನು ಹೂಡುವ ಮುನ್ನಒಮ್ಮೆ ಯೋಚಿಸಿ ನೋಡಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ತಿಳಿ ಹಸಿರು

ಸಿಂಹ

ಸ್ನೇಹಿತರು ಅಥವಾ ಬಂಧು ಬಳಗದವರು ನಿಮ್ಮಿಂದ ಹಣದ ಸಹಾಯ ಬಯಸುತ್ತಾರೆ. ಮಕ್ಕಳ ಜೊತೆಯಲ್ಲಿಅನಾವಶ್ಯಕ ವಾದ ವಿವಾದವಿರುತ್ತದೆ. ಪ್ರೀತಿ ವಿಶ್ವಾಸದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಸಂಗಾತಿಯ ಸಹಾಯ ಸಹಕಾರ ಹೊಸ ಆಸೆಯನ್ನು ಮೂಡಿಸುತ್ತದೆ. ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಧ್ಯಾನ ಮಾರ್ಗವನ್ನು ಅನುಸರಿಸುವಿರಿ ಪ್ರಾಣಿ ಪಕ್ಷಿಗಳಿಗೆ ಆಹಾರದ ವ್ಯವಸ್ಥೆ ಮಾಡಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೇಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 12

ಅದೃಷ್ಟದ ದಿಕ್ಕು ಈಶಾನ್ಯ

ಅದೃಷ್ಟದ ಬಣ್ಣ : ನಸುಗೆಂಪು

ಕನ್ಯಾ

ಬೇರೆಯವರ ತಪ್ಪನ್ನು ಮನ್ನಿಸುವ ಗುಣ ನಿಮ್ಮಲ್ಲಿ ಇರುತ್ತದೆ. ಯಾವುದೇ ವಿಚಾರದಲ್ಲಿ ದೃಢವಾದ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕಷ್ಟದ ವೇಳೆ ಕುಟುಂಬದವರ ಸಹಾಯ ಸಹಕಾರ ಲಭಿಸುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚುತ್ತವೆ. ಮಕ್ಕಳ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸುವಿರಿ. ಸಾಂಸಾರಿಕ ಜೀವನದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿ

ತುಲಾ

ನಿಮ್ಮಲ್ಲಿರುವ ಕ್ರಿಯಾಶೀಲತೆಯಿಂದ ಹಲವರು ಉತ್ತೇಜಿತಗೊಳ್ಳುತ್ತಾರೆ. ಪ್ರಯಾಣದ ಮೇಲೆ ವೇಳೆ ನಿಮಗೆ ಇಷ್ಟವಾದ ವಸ್ತುವೊಂದು ಕಳುವಾಗಬಹುದು ಎಚ್ಚರಿಕೆ ಇರಲಿ. ಒಂದು ರೀತಿಯ ಭಯವು ನಿಮ್ಮಲ್ಲಿ ಮನೆ ಮಾಡಿರುತ್ತದೆ. ಕುಟುಂಬದಲ್ಲಿ ಒಮ್ಮತದ ಕೊರತೆ ಕಂಡು ಬರಲಿದೆ. ಪೂರ್ವ ನಿಯೋಜಿತ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ. ನಗುವಿನಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಬಲ್ಲಿರಿ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ

ವೃಶ್ಚಿಕ

ಆತ್ಮವಿಶ್ವಾಸದಿಂದ ಯಶಸ್ಸನ್ನು ಗಳಿಸುವಿರಿ. ಸಹೋದ್ಯೋಗಿಗಳ ಸಲಹೆಯನ್ನು ಪಾಲಿಸಿದರೆ ಉದ್ಯೋಗದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಹೊಸ ಜನರ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ದಾಂಪತ್ಯದಲ್ಲಿ ಅನ್ಯೋನ್ಯತೆ ಕಂಡು ಬರುತ್ತದೆ. ನಿಮ್ಮನ್ನು ಹೊಗಳಿ ಕಾರ್ಯ ಸಾಧಿಸುವ ಜನರ ಬಗ್ಗೆ ಎಚ್ಚರಿಕೆ ಇರಲಿ.

ಪರಿಹಾರ : ದೇವರ ಮುಂದೆ ತುಪ್ಪದ ದೀಪ ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಬೂದು

ಧನಸ್ಸು

ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಪಾಲ್ಗೊಳ್ಳದಿರಿ. ನಿಮ್ಮಲ್ಲಿನ ನಮ್ರತೆ ಬೇರೆಯವರ ಮನಸ್ಸನ್ನು ಸರಿದಾರಿಗೆ ತರಲಿದೆ. ಉದ್ಯೋಗದಲ್ಲಿ ಹೊಸ ರೀತಿಯ ಬೆಳವಣಿಗೆಗಳು ಕಂಡುಬರುತ್ತವೆ. ಹಣಕಾಸಿನ ಸ್ಥಿತಿಯಲ್ಲಿ ಪ್ರಗತಿ ಕಂಡು ಬರಲಿದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ನಿಮ್ಮದಾಗಲಿದೆ. ಸಂಗಾತಿಯೊಂದಿಗೆ ಆತ್ಮೀಯತೆಯಿಂದ ವರ್ತಿಸಿ. ಇದರಿಂದ ನಿಮಗೆ ಅನುಕೂಲವೇ ಹೆಚ್ಚು.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಆಕಾಶ ನೀಲಿ

ಮಕರ

ನಿಮ್ಮ ಕಾರ್ಯದಕ್ಷತೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿವೆ. ಮಾನಸಿಕ ಒತ್ತಡಕ್ಕೆಒಳಗಾಗುವಿರಿ. ನಿಮ್ಮ ಮಕ್ಕಳ ಸಾಧನೆಯು ನಿಮ್ಮೆಲ್ಲಾ ನೋವನ್ನು ಮರೆಸುತ್ತದೆ. ಅನಾವಶ್ಯಕ ಮಾತುಕತೆಗಳಿಂದ ತಪ್ಪು ಅಭಿಪ್ರಾಯ ಉಂಟಾಗಲಿದೆ. ಮನಸ್ಸಿಗೆ ಬೇಸರವಾಗುವಷ್ಟು ಪ್ರಯಾಣ ಮಾಡುವಿರಿ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಕುಟುಂಬದ ಹಿರಿಯರ ಸಹಕಾರದಿಂದ ಸಣ್ಣ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ.

ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ಕುಂಭ

ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಕುಟುಂಬದಲ್ಲಿ ಪರಸ್ಪರ ಪ್ರೀತಿ ಗೌರವ ಕಂಡುಬರುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಭೂ ವಿವಾದ ಒಂದು ಪರಿಹಾರ ಗೊಳ್ಳಲಿದೆ. ಸೋಲು ಗೆಲುವನ್ನು ಒಂದೇ ಮನೋಭಾವನೆಯಿಂದ ಸ್ವೀಕರಿಸುವಿರಿ. ಮನರಂಜನೆಗಾಗಿ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಸಮಾಜದ ನಾಯಕರಾಗಿ ಹೊರ ಹೊಮ್ಮುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಸಂತಸದಿಂದ ಬಾಳುವಿರಿ.

ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕೇಸರಿ

ಮೀನ

ಸಂಗಾತಿಯ ಸಹಾಯ ಸಹಕಾರ ಜೀವನವದಲ್ಲಿ ಉತ್ತಮ ಬದಲಾವಣೆಗಳನ್ನು ಉಂಟುಮಾಡಲಿದೆ. ಯಾರನ್ನೂ ಅವಲಂಬಿದೆ ಸ್ವಶಕ್ತಿಯಿಂದ ಕೆಲಸ ಸಾಧಿಸುವಿರಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಿರಿ. ಸಂಗಾತಿಯೊಡನೆ ಕಿರುಪ್ರವಾಸಕ್ಕೆ ತೆರಳುವಿರಿ. ನಿಮ್ಮ ಪ್ರೀತಿಯ ಮಾತುಕತೆ ಮಕ್ಕಳಲ್ಲಿ ಹೊಸ ಹುಮ್ಮಸ್ಸು ತುಂಬುತ್ತದೆ. ನಿಮ್ಮ ಪ್ರಭಾವದಿಂದ ಆತ್ಮೀಯರ ಭೂವಿವಾದವು ಕೊನೆಗೊಳ್ಳುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ನೇರಳೆ ಬಣ್ಣ

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು