spot_img

ಇಂದಿನ ಭವಿಷ್ಯ :

ಮೇಷ

ಕೆಲಸ ಕಾರ್ಯಗಳು ನಿರಂತರವಾಗಿ ನಡೆಯಲಿವೆ. ಬಿಡುವಿಲ್ಲದ ಕಾರಣ ಮಾನಸಿಕ ಒತ್ತಡ ಹೆಚ್ಚುತ್ತದೆ. ಉದ್ಯೋಗದಲ್ಲಿ ನಿಮ್ಮ ಮನದಾಳದಂತೆ ಬದಲಾವಣೆಗಳು ಉಂಟಾಗಲಿವೆ. ಕುಟುಂಬ ಸದಸ್ಯರಲ್ಲಿ ಹಣಕಾಸಿನ ಸಂಬಂಧಿತ ಭಿನ್ನಾಭಿಪ್ರಾಯ ಇರುತ್ತದೆ. ಕುಟುಂಬದ ಹಿರಿಯರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. 

ಪರಿಹಾರ: ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ವೃಷಭ

ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುವ ಕಾರಣ ವಿವಾದಗಳು ಇರುವುದಿಲ್ಲ. ಆತ್ಮವಿಶ್ವಾಸದಿಂದ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಆದಾಯದ ವಿಚಾರದಲ್ಲಿ ಅದೃಷ್ಟವಿದೆ. ಆದರೆ ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸಿ. ಹಠದ ಗುಣಕ್ಕೆ ಬೇಸರಗೊಂಡು ಆತ್ಮೀಯರೊಬ್ಬರು ದೂರವಾಗಲಿದ್ದಾರೆ. 

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ : ಕೆಂಪು ಬಣ್ಣ

ಮಿಥುನ  

ಉದ್ಯೋಗದಲ್ಲಿ ಆಂತರಿಕ ಬದಲಾವಣೆಗಳು ಕಂಡುಬರಲಿವೆ. ವಿದ್ಯಾರ್ಥಿಗಳು ಕೋಪವನ್ನು ನಿಯಂತ್ರಿಸಿಕೊಂಡಲ್ಲಿ ಯಶಸ್ಸು ಗಳಿಸುತ್ತಾರೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಆತಂಕಕ್ಕೆ ಒಳಗಾಗುವಿರಿ. ವಿದೇಶದಲ್ಲಿ ಅಧ್ಯಯನ ಮುಂದುವರೆಸುವ ಆಶಯ ಇರಲಿದೆ. 

ಪರಿಹಾರ: ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಕಟಕ

ಉದ್ಯೋಗದಲ್ಲಿ ನಿಮ್ಮ ಆದೇಶವನ್ನು ಒಪ್ಪಿ ನಡೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳು ಅಭ್ಯಾಸಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ನಿಷ್ಕಲ್ಮಶ ಮನಸ್ಸಿನ ಕಾರಣ ಎಲ್ಲರ ಪ್ರೀತಿ ಮತ್ತು ಹೊಗಳಿಕೆಗೆ ಪಾತ್ರರಾಗುವಿರಿ. ದೂರದ ಸಂಬಂಧಿಯೊಬ್ಬರ ಸಹಾಯದಿಂದ ವಿವಾಹ ನಿಶ್ಚಯವಾಗಬಹುದು. 

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ದೀಪದೆಣ್ಣೆ ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಹಳದಿ ಬಣ್ಣ

ಸಿಂಹ

ಸ್ನೇಹಿತರ ಸಹಾಯದಿಂದ ವಿದೇಶಿ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಆತಂಕದ ಛಾಯೆ ಇದ್ದರೂ ವರಮಾನದಲ್ಲಿ ತೊಂದರೆ ಕಂಡುಬಾರದು. ಉನ್ನತ ವಿದ್ಯಾಭ್ಯಾಸಕ್ಕೆ ಹೊರದೇಶಕ್ಕೆ ತೆರಳುವಿರಿ. ಹಣದ ಕೊರತೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. 

ಪರಿಹಾರ: ತಾಯಿಯ ಆಶೀರ್ವಾದ ಪಡೆದು ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ : ಹಸಿರು ಬಣ್ಣ

ಕನ್ಯಾ

ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ವಾದ ವಿವಾದ ಕಂಡು ಬರುತ್ತದೆ. ವಿದ್ಯಾರ್ಥಿಗಳು ಸುಲಭವಾಗಿ ಸಹಪಾಠಿಗಳ ಪ್ರಭಾವಕ್ಕೆ ಮಣಿಯುತ್ತಾರೆ. ಕಂತಿನ ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಆತ್ಮೀಯರೂಬ್ಬರಿಂದ ಹಣದ ಸಹಾಯ ದೊರೆಯಲಿದೆ. 

ಪರಿಹಾರ: ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ನೀಲಿ ಬಣ್ಣ

ತುಲಾ

ಉದ್ಯೋಗದಲ್ಲಿ ಎಲ್ಲರ ಸಹಮತದಿಂದ ಬದಲಾವಣೆ ಮಾಡುವಿರಿ. ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಜವಾಬ್ದಾರಿಯಿಂದ ಮುಂದುವರೆಯುವಿರಿ. ಸಮಾಜದಲ್ಲಿ ನಾಯಕತ್ವದ ಸ್ಥಾನಮಾನ ದೊರೆಯುತ್ತದೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವಿರಿ. 

ಪರಿಹಾರ: ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ವೃಶ್ಚಿಕ

ಕೌಟುಂಬಿಕ ಜೀವನದಲ್ಲಿ ಬೇಸರವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆಗಳು ಕಾಣುವುದಿಲ್ಲ. ಹಗಲುಗನಸು ಕಾಣದೆ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಮಾನಸಿಕ ಒತ್ತಡದಿಂದ ಅನಾರೋಗ್ಯ ಉಂಟಾಗುತ್ತದೆ.

ಪರಿಹಾರ: ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಧನಸ್ಸು

ಉದ್ಯೋಗದಲ್ಲಿ ಸಮಸ್ಯೆಗಳು ಇರುವುದಿಲ್ಲ ಹಾಗೆಯೇ ಪ್ರಗತಿಯೂ ಇರುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳಿಗೆ ಬದ್ದರಾಗಿರಿ. ಅನಿರೀಕ್ಷಿತ ಧನ ಲಾಭವಿದೆ. ಅಳುಕಿನ ಮನಸ್ಸಿನಿಂದ ತೆಗೆದುಕೊಳ್ಳುವ ನಿರ್ಧಾರ ತೊಂದರೆಗಳಿಗೆ ದಾರಿಯಾಗುತ್ತದೆ. 

ಪರಿಹಾರ: ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ಮಕರ

ಕುಟುಂಬದಲ್ಲಿ ಬೇಸರದ ವಾತಾವರಣ ಇರುತ್ತದೆ. ಕೇಳದೇ ಹೋದರೂ ಸ್ನೇಹಿತರ ಸಹಾಯ ದೊರೆಯಲಿದೆ. ಎಲ್ಲರ ಜೊತೆಯಲ್ಲಿ ಶಾಂತಿ ಸಹನೆಯಿಂದ ವರ್ತಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.

ಪರಿಹಾರ: ಸಹೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬೂದು ಬಣ್ಣ

ಕುಂಭ

ಬೇಸರದ ಕಾರಣ ಕುಟುಂಬದಲ್ಲಿ ಅಸಹಕಾರ ಭಾವನೆ ನೆಲೆಸಿರುತ್ತದೆ. ಉದ್ಯೋಗದಲ್ಲಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವಿರಿ. ಆತ್ಮೀಯರ ಒತ್ತಾಯಕ್ಕೆ ಮಣಿದು ಉದ್ಯೋಗ ಬದಲಿಸುವಿರಿ. ವಿದ್ಯಾರ್ಥಿಗಳು ಏಕಾಂಗಿಯಾಗಿ ಕಲಿಕೆಯಲ್ಲಿ ತೊಡಗುತ್ತಾರೆ. ಪ್ರಯೋಜನವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಂದು ಬಣ್ಣ

ಮೀನ

ಕುಟುಂಬದಲ್ಲಿ ಸಹಕಾರದ ವಾತಾವರಣವಿರುತ್ತದೆ. ಧೃಡವಾದ ಸಂಕಲ್ಪದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ. ವಿದ್ಯಾರ್ಥಿಗಳು ದುಡುಕದೆ ಬುದ್ಧಿವಂತಿಕೆಯಿಂದ ಉನ್ನತ ಅಧ್ಯಯನದಲ್ಲಿ ಮುಂದುವರೆಯುತ್ತಾರೆ. ಒಂಟಿಯಾಗಿ ಎದುರಾಗುವ ಸಮಸ್ಯೆಗಳ ವಿರುದ್ದ ಜಯಗಳಿಸುವಿರಿ.

ಪರಿಹಾರ: ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಕಪ್ಪು ಬಣ್ಣ

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು