ಮೇಷ ರಾಶಿ
ಇಂದು ಶುಭ ದಿನವಾಗಿರಲಿದೆ ಮತ್ತು ನಿಮ್ಮ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುವುದು. ಹೊಸ ಕೆಲಸದ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸುವ ಮೂಲಕ ನೀವು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸುತ್ತೀರಿ. ನಿಮ್ಮಲ್ಲಿ ಹೊಸ ಶಕ್ತಿಯ ಸಂಚಾರದಿಂದಾಗಿ, ನಿಮ್ಮ ಜೀವನದಲ್ಲಿನ ವಿವಾದಗಳನ್ನು ದೂರ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಬೌಧಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ನೀವು ಇಂದು ದೊಡ್ಡ ಅವಕಾಶವೊಂದನ್ನು ಪಡೆಯಬಹುದು. ಶ್ರೀಕೃಷ್ಣನನ್ನು ಪೂಜಿಸಿರಿ.
ವೃಷಭ ರಾಶಿ
ಸಹೋದ್ಯೋಗಿಗಳ ಸಹಾಯದಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ದಿನ ನೀವು ನಿರೀಕ್ಷಿಸಿದಕ್ಕಿಂತ ಹೆಚ್ಚು ಹಣವನ್ನು ಪಡೆಯುವುದರಿಂದ ಸಂತೋಷದಿಂದಿರುತ್ತೀರಿ. ನೀವು ಎಲ್ಲಾ ಕಾರ್ಯಗಳಲ್ಲಿಯೂ ಉತ್ಸಾಹದಿಂದ ಮುಂದೆ ಸಾಗುವಿರಿ. ಮನಸ್ಸಿನಲ್ಲಿ ನಡೆಯುತ್ತಿರುವ ಕೆಲವು ವಿಷಯಗಳ ಬಗ್ಗೆ ನೀವು ಚಿಂತಿತವಾಗಿದ್ದರೂ, ನಿಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತೀರಿ. ಮನೆಯಲ್ಲಿನ ಶುಭ ಕಾರ್ಯಕ್ರಮದಿಂದಾಗಿ, ಸಂಬಂಧಿಕರ ಓಡಾಟವನ್ನು ಕಾಣಬಹುದು. ನೀವು ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ಬ್ರಾಹ್ಮಣರಿಗೆ ದಾನ ನೀಡಿ.
ಮಿಥುನ ರಾಶಿ
ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಲಭಿಸುವುದು. ಕೆಲವು ವಿಷಯಗಳ ಬಗ್ಗೆ ನೀವಿಂದು ಎಚ್ಚರದಿಂದಿರಬೇಕು. ನಿಮ್ಮ ಗೌರವದಲ್ಲಿನ ಹೆಚ್ಚಳದಿಂದಾಗಿ ಮನಸ್ಸು ಸಂತೋಷದಿಂದಿರಲಿದೆ. ಅಲ್ಪ ದೂರ ಪ್ರಯಾಣಿಸುವ ಸಾಧ್ಯತೆಯಿದೆ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಮಕ್ಕಳ ಕಡೆಯಿಂದ ಶುಭ ಸುದ್ದಿ ಲಭಿಸಲಿದೆ. ತಂದೆ-ತಾಯಿಯ ಮಾತಿಗೆ ಇಂದು ನೀವು ಗೌರವ ಕೊಡುತ್ತೀರಿ. ಗುರುಗಳ ಅಥವಾ ಹಿರಿಯರ ಆಶೀರ್ವಾದವನ್ನು ಪಡೆಯಿರಿ.
ಕಟಕ ರಾಶಿ
ಈ ದಿನ ಪೂರ್ತಿ ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾವುದೇ ವಿವಾದ ನಡೆಯುತ್ತಿದ್ದರೆ, ಅದು ಪರಿಹಾರವನ್ನು ಕಾಣುವುದರಿಂದ ನೀವು ಸಂತಸದಿಂದಿರುವಿರಿ. ನೀವು ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಕೆಲಸದಲ್ಲಿ ಒತ್ತಡದ ವಾತಾವರಣವಿರುವುದರಿಂದ ನೀವು ಸ್ವಲ್ಪ ಚಿಂತಿತರಾಗಿರುತ್ತೀರಿ. ಇಂದು ಯಾವುದೇ ನಿರ್ಧಾರವನ್ನು ಆತುರದಲ್ಲಿ ಅಥವಾ ಭಾವುಕರಾಗಿ ತೆಗೆದುಕೊಳ್ಳಬೇಡಿ. ನೀವು ಈ ದಿನ ಮಕ್ಕಳಿಗೆ ಸಂಪ್ರದಾಯದ ಬಗ್ಗೆ ತಿಳಿಸುವಿರಿ. ಶಿವ ಚಾಲೀಸವನ್ನು ಪಠಿಸಿ.
ಸಿಂಹ ರಾಶಿ
ಇಂದಿನ ದಿನ ಮಿಶ್ರವಾಗಿರಲಿದೆ. ನಿಮ್ಮ ಕೆಲಸದಲ್ಲಿ ಇಂದು ಪ್ರಗತಿಯನ್ನು ಕಾಣುವಿರಿ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ ಮತ್ತು ಸಂತಸದಿಂದಿರುವಿರಿ. ನೀವು ಎಂದು ಆಸ್ತಿ ಅಥವಾ ವಾಹನವನ್ನು ಖರೀದಿಸುವ ಯೋಗವಿದೆ. ಕೆಲಸ ಮಾಡುವವವರು ಇಂದು ಶ್ರಮವಹಿಸಿ ದುಡಿಯಬೇಕಾಗುತ್ತದೆ. ರಾಜಕೀಯದಲ್ಲಿರುವವರಿಗೆ ಈ ದಿನ ಉತ್ತಮ ಸ್ಥಾನ ಲಭಿಸುವುದು. ಹಳದಿ ವಸ್ತುವನ್ನು ದಾನ ಮಾಡಿ.
ಕನ್ಯಾ ರಾಶಿ
ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಕಾಗುತ್ತದೆ. ಉತ್ತಮವಾಗಿ ಕೆಲಸ ಮಾಡುವ ಮೂಲಕ ನಿಮ್ಮ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯಾಪಾರಿಗಳು ಈ ದಿನ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಇಂದು ಯಾರಿಗೂ ಹಣವನ್ನು ನೀಡಬೇಡಿ, ಯಾಕೆಂದರೆ ಆ ಹಣ ವಾಪಸ್ಸು ನಿಮ್ಮ ಕೈ ಸೇರುವುದು ಅನುಮಾನ. ಅಧಿಕ ಖರ್ಚಿನಿಂದ ನಿಮ್ಮ ಸಮಸ್ಯೆ ಹೆಚ್ಚಾಗುವುದು. ಹಾಗಾಗಿ ಬಜೆಟ್ ರಚಿಸುವುದು ಒಳಿತು. ಹಳದಿ ವಸ್ತುವನ್ನು ದಾನ ಮಾಡಿ.
ತುಲಾ ರಾಶಿ
ಇಂದು ಉತ್ತಮ ದಿನವಾಗಿರಲಿದೆ. ಪ್ರಯಾಣಿಸುವ ಸಂದರ್ಭದಲ್ಲಿ ನಿಮಗೆ ಯಾವುದಾದರೂ ಮುಖ್ಯವಾದ ಮಾಹಿತಿ ಲಭಿಸುವುದು. ಕೆಲಸದಲ್ಲಿರುವವರು ತಮ್ಮ ಹಿರಿಯ ಅಧಿಕಾರಿಗಳ ಮಾತನ್ನು ಸರಿಯಾಗಿ ಕೇಳಿದ ನಂತರವೇ ತಮ್ಮ ಕೆಲಸವನ್ನು ಮುಂದುವರಿಸಬೇಕು. ನೀವು ಯಾರಿಗಾದರೂ ಮಾತು ಕೊಟ್ಟಿದ್ದರೆ, ಅದರಂತೆ ನಡೆಯುವುದು ಉತ್ತಮ. ಜೀವನದಲ್ಲಿ ನೀವು ನಿಮ್ಮ ಸ್ವಂತ ಪ್ರಯತ್ನದಿಂದ ಮುಂದೆ ಸಾಗುವಿರಿ. ತಾಯಿಯೊಂದಿಗೆ ಯಾವುದಾದರೂ ವಿಷಯದ ಬಗ್ಗೆ ಜಗಳವಾಗಬಹುದು. ಅರಳಿ ಮರಕ್ಕೆ ಹಾಲು ಮಿಶ್ರಿತ ನೀರನ್ನು ಅರ್ಪಿಸಿ.
ವೃಶ್ಚಿಕ ರಾಶಿ
ಸುಖ-ಸಮೃದ್ಧಿ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಯಾವುದೇ ಮನಸ್ತಾಪವಿದ್ದರೆ, ಅದು ಈ ದಿನ ದೂರವಾಗುವುದು. ನೀವು ಇಂದು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ನೀವು ಈ ದಿನ ನಿಮ್ಮ ಕೆಲಸದ ಜೊತೆಗೆ ಬೇರೆಯವರ ಕೆಲಸದಲ್ಲಿಯೂ ಸಹಾಯ ಮಾಡುತ್ತೀರಿ. ಯಾವುದೇ ತಪ್ಪು ನಿರ್ಧಾರವನ್ನು ಇಂದು ನೀವು ತಪ್ಪಿಸಬೇಕು, ಹಾಗಾಗಿ ಯಾವುದೇ ರೀತಿಯ ಆತುರದ ನಿರ್ಣಯವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಆದಾಯದಲ್ಲಿ ಹೆಚ್ಚಳದಿಂದಾಗಿ ಮನಸ್ಸು ಸಂತೋಷದಿಂದಿರುತ್ತದೆ. ಮೀನುಗಳಿಗೆ ಗೋಧಿಹಿಟ್ಟಿನಿಂದ ಮಾಡಿದ ಆಹಾರವನ್ನು ನೀಡಿ.
ಧನು ರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಶುಭ ದಿನವಾಗಿರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ನೀವು ಈ ದಿನ ಅಪೂರ್ಣ ಕಾರ್ಯಗಳನ್ನು ಪೂರ್ತಿ ಮಾಡುವುದರಲ್ಲಿ ಸಮಯವನ್ನು ಕಳೆಯುವುದರಿಂದ, ಆರೋಗ್ಯದ ಬಗ್ಗೆ ಗಮನಹರಿಸುವುದಿಲ್ಲ. ಯಾವುದೇ ಮುಖ್ಯವಾದ ವಿಷಯವನ್ನು ಬೇರೆ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಹೊಸ ವ್ಯಕ್ತಿಯ ಭೇಟಿಯಿಂದ ಲಾಭವಾಗಲಿದೆ. ಇಂದು ನಿಮ್ಮ ಮಾತನ್ನು ನಿಮ್ಮ ಹಿರಿಯರು ಕೇಳುವರು. ಹಣದ ವಿಷಯದಲ್ಲಿ ಎಂದು ಜಾಗರೂಕರಾಗಿರಿ. ವಿಷ್ಣುವನ್ನು ಪೂಜಿಸಿ.
ಮಕರ ರಾಶಿ
ಮಕರ ರಾಶಿಯವರಿಗೆ ಆನಂದಮಯ ವಾತಾವರಣವಿರುತ್ತದೆ. ಕುಟುಂಬದಲ್ಲಿ ಯಾವುದೇ ಸಮಸ್ಯೆಯಿದ್ದರೆ, ಅದು ಈ ದಿನ ನಿವಾರಣೆಯಾಗುತ್ತದೆ. ಸಂಪತ್ತಿನಲ್ಲಿ ಹೆಚ್ಚಳದಿಂದಾಗಿ ಮನಸ್ಸು ಸಂತೋಷದಿಂದಿರುತ್ತದೆ. ಇಂದು ನಿಮ್ಮ ಸ್ನೇಹಿತರಿಂದ ಆಸ್ತಿಗೆ ಸಂಬಂದಿಸಿದ ಮುಖ್ಯವಾದ ವಿಷಯದ ಬಗ್ಗೆ ಮಾಹಿತಿ ಲಭಿಸುತ್ತದೆ. ಮನೆಗೆ ಅತಿಥಿಗಳ ಆಗಮನದಿಂದಾಗಿ ನೀವು ಸಂತಸದಿಂದಿರುವಿರಿ. ನಿಮ್ಮ ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ನೀವು ಇಂದು ನಿಮ್ಮ ಹಳೆಯ ತಪ್ಪಿನಿಂದ ಪಾಠ ಕಲಿಯಬೇಕು. ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಮುಖ್ಯವಾದ ದಿನವಾಗಿರಲಿದೆ. ನೀವು ಈ ದಿನ ನಿಮ್ಮ ಇಷ್ಟದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುವಿರಿ ಮತ್ತು ನಿಮ್ಮ ಇಷ್ಟದ ವಸ್ತುವನ್ನು ಗಳಿಸಿಕೊಳ್ಳುವಿರಿ. ನಿಮ್ಮ ಅಪೂರ್ಣ ಕಾರ್ಯಗಳು ಇಂದು ಮುಂದುವರೆಯುವುದು ಮತ್ತು ನಿಮ್ಮ ಕುಟುಂಬದ ಸದಸ್ಯರಿಂದ ಶುಭ ಸುದ್ದಿಯನ್ನು ಪಡೆಯುವಿರಿ. ನಿಮ್ಮ ಪ್ರತಿಭೆ ಇಂದು ಹೊರ ಜಗತ್ತಿಗೆ ಕಾಣುವುದರಿಂದ ನೀವು ಉತ್ತಮ ಲಾಭವನ್ನು ಪಡೆಯುವಿರಿ. ಯಾರ ತಪ್ಪು ನಿರ್ಧಾರಗಳಿಗೆ ನೀವು ಸಹಕರಿಸಬೇಡಿ, ಇಲ್ಲದಿದ್ದರೆ ತೊಂದರೆಗೆ ಸಿಲುಕುವಿರಿ. ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಿ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಖರ್ಚು ಹೆಚ್ಚಾಗಲಿದೆ, ಇದರಿಂದಾಗಿ ನೀವು ಚಿಂತೆಗೆ ಒಳಗಾಗುವಿರಿ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ಲಭಿಸುವುದು. ನಿಮ್ಮ ಒಳ್ಳೆಯ ಸ್ವಭಾವದಿಂದ ನೀವು ಇತರರನ್ನು ಆಕರ್ಷಿಸುತ್ತೀರಿ. ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯಿರಿ. ಯಾವುದೇ ಹೂಡಿಕೆ ಮಾಡುವ ಮೊದಲು ಸರಿಯಾಗಿ ಯೋಚಿಸಿರಿ, ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹಣವನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದರಲ್ಲಿ ಎಚ್ಚರವಹಿಸಿ, ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ಸರಸ್ವತಿ ದೇವಿಯನ್ನು ಪೂಜಿಸಿ.