- ಮೇಷ ರಾಶಿ
ಖರ್ಚು ವೆಚ್ಚಗ೦ಳಿಂದಲೇ ದಿನವನ್ನು ಆರಂಭಿಸುವಿರಿ. ಮನದಲ್ಲಿ ಅಳುಕಿನ ಭಾವನೆ ಕಂಡು ಬರುತ್ತವೆ. ನಿಮ್ಮ ಒಡನಾಟದಿಂದ ಕುಟುಂಬದಲ್ಲಿ ಸಂತಸದ ವಾತಾವರಣ ಉಂಟಾಗುತ್ತದೆ. ಸಂಗಾತಿಗೆ ಅಥವಾ ಮನೆಯ ಸದಸ್ಯರಿಗೆ ಅವರಿಗೆ ಇಷ್ಟವಾಗುವಂತಹ ಉಡುಗೊರೆ ನೀಡುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ.
ಪರಿಹಾರ: ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಕಪ್ಪು ಬಣ್ಣ
ವೃಷಭ ರಾಶಿ
ಆತ್ಮೀಯರ ಸಮಾರಂಭಕ್ಕೆ ಹಣದ ಸಹಾಯ ಮಾಡುವಿರಿ. ಮಕ್ಕಳ ಜೊತೆ ಅವರ ನೆಚ್ಚಿನ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವಿರಿ. ಅನಾವಶ್ಯಕವಾದ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವಿರಿ. ಬಹುದಿನದಿಂದ ಉಳಿದಿದ್ದ ಅತಿ ಮುಖ್ಯ ಕೆಲಸವನ್ನು ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಮುತುವರ್ಜಿಯಿಂದ ಯಾವುದೇ ಕೆಲಸಗಳನ್ನು ಮಾಡಬಲ್ಲಿರಿ. ಕುಟುಂಬದಲ್ಲಿ ಹೊಂದಾಣಿಕೆಯ ವಾತಾವರಣ ನೆಲೆಸಿರುತ್ತದೆ.
ಪರಿಹಾರ: ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ತಿಳಿಹಸಿರು ಬಣ್ಣ
ಮಿಥುನ ರಾಶಿ
ಕೌಟುಂಬಿಕ ವಿಚಾರಗಳಲ್ಲಿ ಧೃಡವಾದ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಆದಾಯದ ಬಗ್ಗೆ ಚಿಂತೆ ಮಾಡುತ್ತೀರಿ. ಕುಟುಂಬದಲ್ಲಿ ಉತ್ತಮ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜೊತೆಯಲ್ಲಿನ ವಾದ ವಿವಾದದಲ್ಲಿ ಜಯ ಲಭಿಸುತ್ತದೆ. ಪ್ರೀತಿ ವಿಶ್ವಾಸದಿಂದ ಜನರ ಮನಸನ್ನು ಗೆಲ್ಲಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಉತ್ತಮ ಸಾಧನೆಗೆ ಪಾತ್ರರಾಗುತ್ತಾರೆ. ತಂದೆಗೆ ಸಂಬಂಧಪಟ್ಟ ಹಣಕಾಸಿನ ವ್ಯವಹಾರದಲ್ಲಿ ಜಯ ಲಭಿಸುತ್ತದೆ.
ಪರಿಹಾರ: ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ
ಕಟಕ ರಾಶಿ
ಸಮಯ ವ್ಯರ್ಥಮಾಡದೆ ಕ್ರಿಯಾಶೀಲರಾಗಿ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಕುಟುಂಬದಲ್ಲಿ ಎಲ್ಲರೊಂದಿಗೆ ಶಾಂತಿ ನೆಮ್ಮದಿಯಿಂದ ಬಾಳುವಿರಿ. ಹೆಚ್ಚಿನ ವೇತನಕ್ಕಾಗಿ ಎಲ್ಲರ ವಿರೋಧದ ನಡುವಿಯೂ ಉದ್ಯೋಗವನ್ನು ಬದಲಾಯಿಸುವಿರಿ. ವಿದ್ಯಾರ್ಥಿಗಳು ಸಹಪಾಠಿಗಳನ್ನು ತಮ್ಮೊಡನೆ ಯಶಸ್ಸಿನ ಕಡೆ ಕರೆದೊಯ್ಯುತ್ತಾರೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಇಲ್ಲದೆ ಹೋದರು ನಷ್ಟ ಉಂಟಾಗದು. ಆಹಾರಕ್ಕೆ ಸಂಬಂಧಿಸಿದ ಪದಾರ್ಥಗಳ ಮಾರಾಟದಲ್ಲಿ ವಿಶೇಷ ಲಾಭ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.
ಪರಿಹಾರ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿಬಣ್ಣ
ಸಿಂಹ ರಾಶಿ
ಮಾತಿನಲ್ಲಿ ನಿಮ್ಮನ್ನು ಗೆಲ್ಲಲು ಯಾರಿಂದಲೂ ಸಾಧ್ಯವಾಗದು. ಹಠದ ಗುಣದಿಂದ ಆತ್ಮೀಯರ ಸ್ನೇಹವನ್ನು ಕಳೆದುಕೊಳ್ಳೂವಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಬೇಧ ಭಾವ ತೋರದೆ ಅವಶ್ಯಕ ಇದ್ದವರಿಗೆ ಸಹಾಯವನ್ನು ಮಾಡುವಿರಿ. ರಾಜಕೀಯದಲ್ಲಿನ ಆಸಕ್ತಿ ಕ್ರಮೇಣವಾಗಿ ಕಡಿಮೆ ಆಗಲಿದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಮನೆಮಾಡುತ್ತದೆ. ಮಕ್ಕಳ ಆಸೆಯನ್ನು ಪೂರೈಸದ ಕಾರಣ ಜಗಳದ ಸನ್ನಿವೇಶ ಇರುತ್ತದೆ. ಉದ್ಯೋಗದಲ್ಲಿ ಸಕಾರಾತ್ಮಕ ಫಲಗಳನ್ನು ಪಡೆಯುವಿರಿ.
ಪರಿಹಾರ: ತಲೆಗೆ ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ಹಾಲು ಬಣ್ಣ
ಕನ್ಯಾ ರಾಶಿ
ಅಚಲ ವಿಶ್ವಾಸದಿಂದ ಯಾವುದೇ ಕೆಲಸ ಕಾರ್ಯವನ್ನು ಆರಂಭಿಸುವಿರಿ. ದೃಡವಾದ ನಿಲುವು ನಿಶ್ಚಲ ಜಯವನ್ನು ನೀಡುತ್ತದೆ. ಬದಲಾಗುವ ಮನಸ್ಸು ಅಥವಾ ತೀರ್ಮಾನಗಳು ತೊಂದರೆಗೆ ಕಾರಣವಾಗುತ್ತದೆ. ಕುಟುಂಬದ ಸದಸ್ಯರ ನಡುವೆ ಒಮ್ಮತ ಕಂಡು ಬರುತ್ತದೆ. ಉದ್ಯೋಗದಲ್ಲಿ ಅತಿ ವಿಶೇಷತೆ ಏನು ಇರುವುದಿಲ್ಲ. ಆದರೆ ತೊಂದರೆಯೂ ಇರುವುದಿಲ್ಲ. ವಿದ್ಯಾರ್ಥಿಗಳು ಅನಾವಶ್ಯಕ ಮಾತು ಕಡಿಮೆ ಮಾಡಿ ಸಾಧನೆಯ ಕಡೆಗೆ ಗಮನ ನೀಡಬೇಕು.
ಪರಿಹಾರ: ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 4
ಅಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಹೊಗೆಯ ಬಣ್ಣ
ತುಲಾ ರಾಶಿ
ಕುಟುಂಬದಲ್ಲಿ ಎಲ್ಲರಲ್ಲಿಯೂ ಹಾಸ್ಯದ ಮನೋಭಾವನೆ ಇರಲಿದೆ. ದಿನನಿತ್ಯದ ಕೆಲಸಗಳು ಸುಲಭಗತಿಯಲ್ಲಿ ಪೂರ್ಣಗೊಳ್ಳಲಿವೆ. ಉತ್ತಮ ಧನಲಾಭದ ಕಾರಣ ಮನಸ್ಸು ಉಲ್ಲಸಿತವಾಗಿರುತ್ತದೆ. ಬೇಸರದ ಸನ್ನಿವೇಶಗಳು ಕುಟುಂಬದಲ್ಲಿ ಎದುರಾದರು ಕ್ಷಮಾ ಗುಣದಿಂದಾಗಿಸಮಸ್ಯೆಗಳು ದೂರವಾಗುತ್ತವೆ. ಉದ್ಯೋಗದಲ್ಲಿ ಸಹೋದ್ಯೋಗಗಳಿಂದಲೇ ಸವಾಲುಗಳನ್ನು ಎದುರಿಸುವಿರಿ. ಸಂಗಾತಿಯ ಸಹಾಯ ಸಹಕಾರದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ
ವೃಶ್ಚಿಕ ರಾಶಿ
ನಿಮ್ಮಲ್ಲಿನ ಮೃದುವಾದ ಮನಸ್ಸು ಕುಟುಂಬವನ್ನು ತೊಂದರೆಗಳಿಂದ ದೂರಮಾಡಲಿದೆ. ಕುಟುಂಬದಲ್ಲಿ ಗಂಭೀರದ ವಾತಾವರಣ ಕಂಡುಬರುತ್ತದೆ. ಉದ್ಯೋಗದಲ್ಲಿ ಅಚಲವಾದ ವಿಶ್ವಾಸ ಉನ್ನತ ಮಟ್ಟವನ್ನು ನೀಡುತ್ತದೆ. ಆತ್ಮವಿಶ್ವಾಸದಿಂದ ಹಣಕಾಸಿನ ಸಮಸ್ಯೆಯಿಂದ ಪಾರಾಗುವಿರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ಜರುತಲಿದೆ. ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ವಾತಾವರಣವಿರುತ್ತದೆ. ಅವಶ್ಯಕತೆಗೆ ಬೇಕಾದಷ್ಟು ಹಣವನ್ನು ಕಷ್ಟಪಟ್ಟು ಸಂಪಾದಿಸುವಿರಿ. ಕಷ್ಟ ಎನಿಸಿದರೂ ಹಣವನ್ನು ಉಳಿಸುವಿರಿ.
ಪರಿಹಾರ: ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ರಕ್ತದ ಬಣ್ಣ
ಧನಸ್ಸು ರಾಶಿ
ಸಮರ್ಪಣಾ ಮನೋಭಾವನೆಗೆ ನೆಚ್ಚಿನ ಫಲಿತಾಂಶಕ್ಕೆ ದೊರೆಯತ್ತದೆ. ವಿಚಾರಗಳನ್ನು ಅರ್ಥಮಾಡಿಕೊಂಡಮೇಲೆ ಸೂಕ್ತವಾದ ಸರಿಯಾದಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಹೆಚ್ಚುತ್ತದೆ. ಹಣಕಾಸಿನ ವಿಚಾರದಲ್ಲಿ ಮನಸ್ಸು ಬದಲಾಯಿಸುವ ಕಾರಣ ಕೊಂಚ ನಷ್ಟವಾಗುತ್ತದೆ. ಕುಟುಂಬದಲ್ಲಿ ಮಕ್ಕಳಿಂದಾಗಿ ಸಂತೋಷದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಂಡು ಬರದು.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ
ಮಕರ ರಾಶಿ
ಮನೆಜನರ ಕೆಲಸ ಕಾರ್ಯಗಳನ್ನು ಮನಸ್ಸಿಟ್ಟು ಪೂರ್ಣಗೊಳಿಸುವಿರಿ. ಒಳ್ಳೆಯ ಗುಣವಿದ್ದರೂ ದುಡುಕಿ ಮಾತನಾಡುವ ಕಾರಣ ಕೆಟ್ಟ ಹೆಸರನ್ನು ಗಳಿಸುವಿರಿ. ಶಾಂತಿ ಸಂಯಮದಿಂದಷ್ಟು ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಎದುರಾಗದು. ಶಿಕ್ಷಕರ ಸಹಾಯದಿಂದ ವಿದ್ಯಾರ್ಥಿಗಳು ವಿಶೇಷ ಸಾಧನೆಗೆ ಪಾತ್ರರಾಗುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯಮ ಮಟ್ಟದ ಲಾಭ ದೊರೆಯಲಿದೆ.
ಪರಿಹಾರ: ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ಕುಂಭ ರಾಶಿ
ಮನಸ್ಸಿನಲ್ಲಿರುವ ಕಾರ್ಯಯೋಜನೆಗಳನ್ನು ರಹಸ್ಯವಾಗಿಡುವಿರಿ. ಕುಟುಂಬಕ್ಕೆ ಸಂಬಂಧಿಸಿದ ವಿವಾದ ಒಂದರಲ್ಲಿ ಏಕಾಂಗಿಯಾಗಿ ಹೋರಾಡಿ ಯಶಸ್ಸು ಗಳಿಸುವಿರಿ. ನಿಮ್ಮಲ್ಲಿನ ಗೆಲ್ಲುವ ಛಲ ಎಲ್ಲರಿಗೂ ಸ್ಪೂರ್ತಿಯಾಗುತ್ತದೆ. ಆರಂಭಿಸುವ ಕೆಲಸ ಕಾರ್ಯಗಳು ನಿಧಾನವಾಗುವ ಕಾರಣ ತೊಂದರೆಯನ್ನು ಅನುಭವಿಸುವಿರಿ. ವಿದೇಶಿ ಸಂಸ್ಥೆಯೊಂದರ ಪಾಲುಗಾರಿಕೆಯು ದೊರೆಯುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ.
ಪರಿಹಾರ: ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ಮೀನ ರಾಶಿ
ಕುಟುಂಬದ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಕಾರ್ಯದಕ್ಷತೆಗೆ ಬೆಲೆ ಕೊಟ್ಟು ಉದ್ಯೋಗದಲ್ಲಿ ಉನ್ನತ ಅಧಿಕಾರ ನೀಡುತ್ತಾರೆ. ಮನೆಕಟ್ಟಲು ಬೇಕಾದ ಪದಾರ್ಥಗಳ ಸರಭರಾಜಿನಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಹವ್ಯಾಸಕ್ಕೆ ಎಂದು ಆರಂಭಿಸಿದ ಕೆಲಸವೊಂದು ಜೀವನ ನಡೆಸಲು ಸಹಕಾರಿಯಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಿಯಮಿತ ಲಾಭ ದೊರೆಯಲಿದೆ. ತಂದೆಯವರಿಗೆ ಅನಿರೀಕ್ಷಿತ ಧನ ಲಾಭವಿದೆ. ಕುಟುಂಬದಲ್ಲಿರುವ ಕಲಹ ಒಂದನ್ನು ಸುಲಭವಾಗಿ ಪರಿಹರಿಸುವಿರಿ.
ಪರಿಹಾರ: ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ : ಕೆಂಪುಬಣ್ಣ