spot_img

ಅಮೆರಿಕ ಕಂಪೆನಿಗೆ ಉಡುಪಿ ಮೂಲದ ಕಾರ್ತಿಕ್ ರಾವ್ ಸಿಇಒ :

ಅಮೆರಿಕ ಕಂಪೆನಿಗೆ ಉಡುಪಿ ಮೂಲದ ಕಾರ್ತಿಕ್ ರಾವ್ ಸಿಇಒ
Contentful Company CEO Karthik Rau: ಅಮೆರಿಕದ ಕಂಟೆಂಟ್‌ಫುಲ್ ಎಂಬ ಕಂಪೆನಿಯ ಸಿಇಒ ಆಗಿ ಉಡುಪಿ ಮೂಲದ ಕಾರ್ತಿಕ್ ರಾವ್ ಇತ್ತೀಚೆಗೆ ನೇಮಕಗೊಂಡಿದ್ದಾರೆ. ಉಡುಪಿ ತಾಲೂಕು ಅಲೆವೂರು ಮೂಲದವರಾದ ಅಮೆರಿಕ ನಿವಾಸಿ ದಿವಂಗತ ಡಾ. ಸುಬ್ರಹ್ಮಣ್ಯ ರಾವ್ ಅವರ ಮಗನಾಗಿರುವ ಕಾರ್ತಿಕ್, ಉನ್ನತ ಹುದ್ದೆಗೇರಿರುವುದು ಹೆಮ್ಮೆ ಮೂಡಿಸಿದೆ.

ಉಡುಪಿ: ಮೈಕ್ರೋಸಾಫ್ಟ್, ಆಲ್ಬಾ ಬೆಟ್, ನೊವಾರ್ಟಿಸ್, ಎಡೋಬ್, ಐಬಿಎಂ ಸಹಿತ 30ಕ್ಕೂ ಅಧಿಕ ಜಾಗತಿಕ ಕಂಪನಿಗಳಿಗೆ ಭಾರತೀಯರು ಯಶಸ್ವಿಸಿ ಇಒಗಳಾಗಿದ್ದು, ಈಗ ಉಡುಪಿ ಮೂಲದ ಕಾರ್ತಿಕ್ ರಾವ್ ಸರದಿ.
ಅಮೆರಿಕದ ಕಂಟೆಂಟ್‌ಫುಲ್ (ಡೆನ್ವರ್ ಆಂಡ್ ಸಾನ್ ಫ್ರಾನ್ಸಿಸ್ಕೊ ಆಂಡ್ ಬರ್ಲಿನ್) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ತಿಕ್ ಅಧಿಕಾರ ವಹಿಸಿಕೊಂಡಿದ್ದಾರೆ. 2019ರಿಂದ ಸಿಇಒ ಆಗಿದ್ದ ಸ್ಟೀವ್ ಫ್ಲೋವನ್ ಬದಲಿಗೆ ಅವರು ಕಂಪನಿಯನ್ನು ಮುನ್ನಡೆಸಲಿದ್ದಾರೆ.
ಉಡುಪಿ ತಾಲೂಕು ಅಲೆವೂರು ಮೂಲದ ಅಮೆರಿಕ ನಿವಾಸಿ ದಿ. ಡಾ. ಸುಬ್ರಹ್ಮಣ್ಯ ರಾವ್ ಅವರ ಪುತ್ರ ಕಾರ್ತಿಕ್ ರಾವ್ (46) ಅಮೆರಿಕದಲ್ಲಿ ಹುಟ್ಟಿ ಎಂಎಸ್ (ಸ್ಕ್ಯಾನ್ ಫರ್ಡ್ ವಿವಿಯಿಂದ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ) ಪೂರೈಸಿದ್ದಾರೆ. 20 ವರ್ಷಗಳಿಂದ ನಾಯಕತ್ವದ ಅನುಭವದೊಂದಿಗೆ ಕಂಪನಿಯ ಸ್ಥಾಪಕ, ನಿರ್ವಹಣಾ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಕಾರ್ತಿಕ್ ಸಂಸ್ಥಾಪಕ ಮತ್ತು ಸಿಇಒ ಆಗಿದ್ದ ಕೌಡ್ ಮಾನಿಟರಿಂಗ್‌ಗೆ ಸಂಬಂಧಿಸಿದ ಸಿಗ್ನಲ್ ಎಫ್ ಎಕ್ಸ್ ಕಂಪನಿಯನ್ನು ಇತ್ತೀಚೆಗೆ ಸ್ಪ್ಲಂಕ್ ಕಂಪನಿಯು 1.05 ಬಿಲಿಯನ್ ಡಾಲರ್ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿದೆ.
ವಿಎಂವೇರ್ ಸಂಸ್ಥೆಯ ಪ್ರೊಡಕ್ಟ್ ಮ್ಯಾನೇಜ್‌ಮೆಂಟ್ ಮತ್ತು ವರ್ಲ್ಡ್ ವೈಡ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರಾಗಿದ್ದ ಕಾರ್ತಿಕ್, ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕಂಟೆಂಟ್‌ ಫುಲ್ ಸ್ಟುಡಿಯೋ ಪ್ರೊಡಕ್ಟ್ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. 10 ಬಿಲಿಯನ್ ಡಾಲರ್‌ನಿಂದ ತೊಡಗಿ 1920 ಬಿಲಿಯನ್ ಡಾಲರ್ ತನಕದ ಜಗತ್ತಿನ 30ಕ್ಕೂ ಅಧಿಕ ಕಂಪನಿಗಳಿಗೆ ವಿರಳ ಮಹಿಳೆಯರ ಸಹಿತ ಭಾರತೀಯರು ಸಿಇಒಗಳಾಗಿದ್ದಾರೆ.

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು